ರೈಲ್ವೆ ಸುರಕ್ಷತಾ ವರದಿ ಸಲ್ಲಿಕೆ ಇಂದು

7

ರೈಲ್ವೆ ಸುರಕ್ಷತಾ ವರದಿ ಸಲ್ಲಿಕೆ ಇಂದು

Published:
Updated:

ನವದೆಹಲಿ (ಪಿಟಿಐ): ಹಳಿಗಳ ಸುಧಾರಣೆ, ಡೀಸೆಲ್ ಹಾಗೂ ವಿದ್ಯುತ್ ಶಕ್ತಿಯಿಂದ ನಡೆಯುವ ಎಂಜಿನ್‌ಗಳ ಚಾಲಕರನ್ನು ಪ್ರತ್ಯೇಕ ಶ್ರೇಣಿ ಮಾಡುವ ಕುರಿತ ತಮ್ಮ ವರದಿಯನ್ನು ಉನ್ನತ ಮಟ್ಟದ ರೈಲ್ವೆ ಸುರಕ್ಷಾ ಪರಿಶೀಲನಾ ಸಮಿತಿ ಮುಖ್ಯಸ್ಥ, ಅಣುಶಕ್ತಿ ಮಂಡಳಿಯ ಮಾಜಿ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಶುಕ್ರವಾರ ನೀಡಲಿದ್ದಾರೆ. 2012-13ರ ರೈಲ್ವೆ ಬಜೆಟ್ ಮಂಡನೆಯಾಗುವ ಒಂದು ವಾರದ ಮುನ್ನ ವರದಿಯನ್ನು ಸಲ್ಲಿಸಲಾಗುತ್ತಿದೆ. ಉತ್ತಮ ಸಿಗ್ನಲ್ ವ್ಯವಸ್ಥೆಗಾಗಿ ಈಗಾಗಲೇ ದೆಹಲಿ ಮೆಟ್ರೊ ರೈಲ್ವೆಯಲ್ಲಿ ಬಳಸಲಾಗಿರುವ ತಂತ್ರಜ್ಞಾನಕ್ಕೆ ವರದಿಯಲ್ಲಿ ಒತ್ತು ನೀಡಲಾಗಿದೆ.ಸಿಗ್ನಲ್ ಅನ್ನು ದಾಟಿ ಮುಂದೆ ಹೋಗುವ ಪ್ರಕರಣದಲ್ಲಿ ಹಾಗೂ ಜಾನುವಾರುಗಳಿಗೆ ಡಿಕ್ಕಿ ಹೊಡೆದು ಎಂಜಿನ್ ಹಳಿ ತಪ್ಪದಂತೆ ಸ್ವಯಂಚಾಲಿತ ಮುನ್ನೆಚ್ಚರಿಕಾ ವ್ಯವಸ್ಥೆಯನ್ನು ಕಲ್ಪಿಸುವಂತೆ ವರದಿ ಶಿಫಾರಸು ಮಾಡಬಹುದು.

ರೈಲು ಚಾಲಕರು ಕೆಲಸಕ್ಕೆ ಬರುವ ಮುನ್ನ ಸಾಕಷ್ಟು ವಿಶ್ರಾಂತಿ ಪಡೆಯುವಂತೆ ಸಮಿತಿ ಶಿಫಾರಸು ಮಾಡಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸಮಿತಿಯನ್ನು ರಚಿಸಲಾಗಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry