ಗುರುವಾರ , ಜೂನ್ 24, 2021
28 °C

ರೈಲ್ವೇ ಮಂತ್ರಿಯಾಗಿ ಮುಕುಲ್ ರಾಯ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವ ದೆಹಲಿ: ರೈಲು ಪ್ರಯಾಣ ದರ ಏರಿಕೆ ಕುರಿತಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರ ಆದೇಶದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನೇಶ್ ತ್ರಿವೇದಿ ಅವರಿಂದ ತೆರವಾದ ಸ್ಥಾನಕ್ಕೆ ಅದೇ ಪಕ್ಷದ ಮುಕುಲ್ ರಾಯ್ ಅವರು ನೂತನ ರೈಲ್ವೇ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ದಿನೇಶ್ ತ್ರಿವೇದಿ ಅವರು ಪ್ರಧಾನ ಮಂತ್ರಿ ಅವರಿಗೆ ತಮ್ಮ ರಾಜೀನಾಮೆ ನೀಡಿದ ನಂತರ ಮಮತಾ ಬ್ಯಾನರ್ಜಿ ಅವರು ಮುಕುಲ್ ರಾಯ್ ಅವರ ಹೆಸರನ್ನು ಸೂಚಿಸಿದ್ದರು. ಸಧ್ಯ ಬಂದರು ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ರಾಯ್ ಅವರು ಕ್ಯಾಬಿನೆಟ್ ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.

ದಿನೇಶ್ ತ್ರಿವೇದಿ ಅವರು ಮಂಡಿಸಿರುವ ರೈಲ್ವೇ ಬಜೆಟ್ ಗೆ ತಮ್ಮ ಅಸಮಾಧಾನ ಸೂಚಿಸಿರುವ ಮಮತಾ ಬ್ಯಾನರ್ಜಿ ಅವರು ~ಮುಕುಲ್ ರಾಯ್ ಅಧಿಕಾರ ಸ್ವೀಕರಿಸಿದ ನಂತರ ಹೆಚ್ಚಿಸಿರುವ ಉದ್ದೇಶಿತ ಕೆಳ ದರ್ಜೆ ಪ್ರಯಾಣ ದರಕ್ಕೆ ತಿದ್ದುಪಡಿ ತರಲಾಗುವುದು~ ಎಂದಿದ್ದಾರೆ.

~ಮೇಲ್ದರ್ಜೆ ಪ್ರಯಾಣದ ದರವನ್ನು ಹೆಚ್ಚಿಸಿರುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ ಬಡವರು ಅಥವಾ ಶಯನ ಶ್ರೇಣಿಯಲ್ಲಿ ಪ್ರಯಾಣಿಸುವವರಿಗೆ ಉದ್ದೇಶಿತ ದರ ಏರಿಕೆ ಹೊರೆಯಾಗಲಿದೆ~ ಎಂದು ಅವರು ತಿಳಿಸಿದರು.

ಕೇಂದ್ರ ರೈಲ್ವೇ ಬಜೆಟ್ ಮಂಡಿಸಿದ ದಿನೇಶ್ ತ್ರಿವೇದಿ ಅವರು ಭಾನುವಾರ ತಮ್ಮ ರಾಜೀನಾಮೆಯನ್ನು ಪ್ರಧಾನ ಮಂತ್ರಿ ಅವರಿಗೆ ರವಾನಿಸಿದ್ದರು. ಕೇಂದ್ರ ಕ್ಯಾಬಿನೆಟ್ನಿಂದ ಹೊರ ಬಂದ ತೃಣಮೂಲ ಕಾಂಗ್ರೆಸ್ ನಾಯಕನ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ~2020ರ ಯೋಜನೆಗೆ ತ್ರಿವೇದಿ ಅವರು ಮಂಡಿಸಿದ ಬಜೆಟ್ ಪ್ರಸ್ಥುತವಾಗಿತ್ತು~ ಎಂದು ಬಣ್ಣಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.