ಶುಕ್ರವಾರ, ಮೇ 14, 2021
35 °C

ರೋಕ್: ಪರಮಾಣು ಘಟಕ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಎಎಫ್‌ಪಿ): ಜಪಾನ್ ಮೇಲೆ ಅಪ್ಪಳಿಸಿರುವ `ರೋಕ್~ ಚಂಡಮಾರುತದಿಂದ ಸತ್ತವರ ಸಂಖ್ಯೆ 10ಕ್ಕೆ ಏರಿದೆ.ಅಬ್ಬರದಿಂದ ಮುನ್ನುಗ್ಗುತ್ತಿರುವ ಈ ಚಂಡಮಾರುತವು ಫುಕುಶಿಮಾದಲ್ಲಿರುವ ಪರಮಾಣು ಸ್ಥಾವರಗಳಿಗೂ ತಟ್ಟಿದೆ. ಆದರೆ, ಹೆಚ್ಚಿನ ಹಾನಿಯನ್ನೇನು ಉಂಟು ಮಾಡಿಲ್ಲ.ಸುನಾಮಿಯಿಂದ ಜರ್ಜರಿತವಾದ ಫುಕುಶಿಮಾದ ಪರಮಾಣು ಸ್ಥಾವರದ ಘಟಕಗಳು ಈಗಷ್ಟೇ ಒಂದು ಹಂತಕ್ಕೆ ಬಂದಿವೆ. ಅಷ್ಟರಲ್ಲಿ ಚಂಡಮಾರುತದ ಹೊಡೆತ ಶುರುವಾಗಿ  ಭೀತಿಯನ್ನುಂಟು ಮಾಡಿತ್ತು ಎಂದು ಈ ಘಟಕ ನಿರ್ವಾಹಕರು ಹೇಳಿದ್ದಾರೆ.ಸರ್ಕಾರಿ ಸ್ವಾಮ್ಯದ ಪ್ರಸಾರ ವಾಹಿನಿ `ಎನ್‌ಎಚ್‌ಕೆ~ ಮತ್ತು `ಜಿಜಿ~ ಸುದ್ದಿಸಂಸ್ಥೆ ಸತ್ತವರ ಸಂಖ್ಯೆ 10ಕ್ಕೆ ಏರಿದ್ದು, ಐವರು ಕಣ್ಮರೆಯಾಗಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿವೆ.ಶಿಜುಕ ಪ್ರದೇಶದಲ್ಲಿ 101 ವರ್ಷದ ಅಜ್ಜಿಯೊಬ್ಬರು ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಐವಟೆ ಪ್ರದೇಶದಲ್ಲಿ ಭೂ ಕುಸಿತದ ಕಾರಣ ಮಣ್ಣಿನಲ್ಲಿ ಹೂತುಹೋಗಿದ್ದ ನಾಲ್ಕು ಶವಗಳನ್ನು, ಅಯಾಚಿ ಭಾಗದಲ್ಲಿ ನದಿಯಲ್ಲಿ ಕೊಚ್ಚಿಕೊಂಡು ಬಂದ ಒಂದು ದೇಹವನ್ನು ಪೊಲೀಸ್ ಮತ್ತು ಪರಿಹಾರ ಕಾರ್ಯ ಪಡೆಯವರು ಗುರುವಾರ ಬೆಳಿಗ್ಗೆ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.