`ರೋಗ ಬರುವ ಮೊದಲೇ ಎಚ್ಚರ ವಹಿಸಿ'

7

`ರೋಗ ಬರುವ ಮೊದಲೇ ಎಚ್ಚರ ವಹಿಸಿ'

Published:
Updated:

ಮುಂಡರಗಿ: ಕುರಿ ಹಾಗೂ ಮೇಕೆಗಳಿಗೆ ಬರುವ ಸಾಮಾನ್ಯ ಸಾಂಕ್ರಾಮಿಕ ರೋಗಗಳ ಕುರಿತು ಕುರಿಗಾರರು ಸದಾ ಜಾಗೃತರಾಗಿರಬೇಕು. ಕುರಿ ಹಾಗೂ ಮೇಕೆಗಳಿಗೆ ಗಂಭೀರ ಕಾಯಿಲೆ ಬಂದಾಗ ವೈದ್ಯರಲ್ಲಿಗೆ ಧಾವಿಸುವದ ಕ್ಕಿಂತ ಅವುಗಳಿಗೆ ರೋಗ ಬರದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾ ಯಕ ನಿರ್ದೇಶಕ ಡಾ.ಮುಲ್ಕಿ ಪಾಟೀಲ ಸಲಹೆ ನೀಡಿದರು.ಸಂಗೊಳ್ಳಿ ರಾಯಣ್ಣ ಕುರಿ ಸಂಗೋಪನೆ ಹಾಗೂ ಉಣ್ಣೆ ಉತ್ಪಾದನಾ ಸಹಕಾರ ಸಂಘವು ಸೋಮವಾರ ವರ್ತೂರು ಪ್ರಕಾಶ್ ಜನ್ಮ ದಿನದ ಅಂಗವಾಗಿ ಪಟ್ಟಣದಲ್ಲಿ ಏರ್ಪಡಿಸಿದ್ದ ಕುರಿಗಾರರಿಗೆ ಉಚಿತ ಔಷಧ ಹಾಗೂ ನೋಟಬುಕ್ ವಿತರ ಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಹಾರ ತುರಾಯಿಗಳನ್ನು ಅರ್ಪಿ ಸುವುದರ ಬದಲಾಗಿ ಸಮಾಜಕ್ಕೆ ಒಳಿತಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ನಾಯಕ ವರ್ತೂರ್ ಪ್ರಕಾಶ್ ಅವರ ಹುಟ್ಟಹಬ್ಬವನ್ನು ಆಚರಿಸಲಾಗುತ್ತಿದೆ. ತುಳಿತಕ್ಕೆ ಒಳಗಾದವರ ಪರವಾಗಿ ಸದಾ ಹೋರಾಡುತ್ತಿರುವ ವರ್ತೂರ್ ಪ್ರಕಾಶ್ ಅವರ ಕಾರ್ಯ ಶ್ಲಾಘ ನೀಯ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ವರ್ತೂರ್ ಪ್ರಕಾಶ್ ಯುವಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಫಕ್ಕಿರೇಶ ಮ್ಯಾಟಣ್ಣವರ ತಿಳಿಸಿದರು.ಸಂಗೊಳ್ಳಿ ರಾಯಣ್ಣ ಕುರಿ ಸಂಗೋಪನೆ ಹಾಗೂ ಉಣ್ಣೆ ಉತ್ಪಾ ದನಾ ಸಹಕಾರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಬದಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ವೀರಣ್ಣ ಮದ್ದೀನ, ಗುಡದಯ್ಯ ಯಳವತ್ತಿ, ಪರಶುರಾಮ ಜೋಗೇರ, ಮೈಲಾರೆಪ್ಪ ಶೀರನಹಳ್ಳಿ, ಹೇಮಣ್ಣ ಗೌಡರ, ದೇವಪ್ಪ ಡಂಬಳ, ವೆಂಕಪ್ಪ ಲಮಾಣಿ, ನಿಂಗಪ್ಪ ಮಿಳ್ಳಿ ಹಾಜರಿದ್ದರು. ಸಂಗೊಳ್ಳಿ ರಾಯಣ್ಣ ಕುರಿ ಸಂಗೋಪನೆ ಹಾಗೂ ಉಣ್ಣೆ ಉತ್ಪಾ ದನಾ ಸಹಕಾರ ಸಂಘದ ಉಪಾಧ್ಯಕ್ಷ ನಿಂಗಪ್ಪ ಗುಡ್ಡದ ಸ್ವಾಗತಿ ಸಿದರು. ಕಾರ್ಯದರ್ಶಿ ನೀನೆಪ್ಪ ಖಾನಾಪೂರ ರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry