ಬುಧವಾರ, ಮೇ 25, 2022
23 °C

ರೋಚಕ ಮಲ್ಲಕಂಭ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಳಿಕೋಟೆ: ಮಹಾದೇವ ಗ್ರಾಮಾಭಿವೃದ್ಧಿ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಗ್ರಾಮದೇವತೆಯ ಜಾತ್ರಾ ಮಹೋತ್ಸವದಲ್ಲಿ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೂಡಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮಲ್ಲಕಂಭ ಪ್ರದರ್ಶನ ರೋಚಕ ಅನುಭವ ನೀಡಿತು.ಕೂಡಲಗಿ ಶಾಲೆಯ ಶಿಕ್ಷಕ ಮಹಾದೇವ ಕಮತಗಿ ಅವರ ಗರಡಿಯಲ್ಲಿ ಪಳಗಿರುವ ಮಕ್ಕಳು ನೀಡಿದ ಪ್ರದರ್ಶನವನ್ನು ಸೇರಿದ್ದ ಜನತೆ ಉಸಿರು ಬಿಗಿಹಿಡಿದು ನೋಡಿದರು  ಜಾರುತ್ತಿದ್ದ ಮಲ್ಲಕಂಬವನ್ನು ಪಟ್ಟು ಸಡಿಲಿಸದೇ ಮೇಲೇರುವುದರ ಜೊತೆಗೆ ಅಲ್ಲಿ ವಿವಿಧ ಆಸನಗಳನ್ನು ಹಾಕುವ ಮೂಲಕ ಪ್ರೇಕ್ಷಕರ ಮೈ ರೋಮಾಂಚನಗೊಳಿಸಿದರು. ಮಲ್ಲಕಂಭದೊಂದಿಗೆ ಹಗ್ಗದಲ್ಲಿಯೂ ಸಹ ವಿವಿಧ ಆಸನಗಳನ್ನು ಪ್ರದರ್ಶನ ಮಾಡಿ ಮೆಚ್ಚುಗೆ ಪಡೆದರು. ಪಿರಾಮಿಡ್ ರಚನೆ, ಅರ್ಧ ಕಟಿ ಚಕ್ರಾಸನ, ವೃಕ್ಷಾಸನ, ವೀರಭದ್ರ ಆಸನ, ಧನುರಾಸನ, ಪದ್ಮಾಸನ ಮೊದಲಾದ ಪ್ರದರ್ಶನ ಮಾಡಿದರು.  ಹಗ್ಗದ ಮೇಲೆ ಮಾಡುವ ಆಸನಗಳಲ್ಲಿ ಅವರ ಝಾಪ ವಿಶೇಷವಾಗಿತ್ತು. ಹಗ್ಗದಲ್ಲಿ ಜಾರುಜಾರುತ್ತಿದ್ದಂತೆ ಆಸನಗಳು ಸೃಷ್ಟಿಯಾಗುತ್ತಿದ್ದವು.ಕಾರ್ಯಕ್ರಮದಲ್ಲಿ ಸಿಪಿಐ ವಿಠ್ಠಲ ಏಳಗಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ (ಕೂಚಬಾಳ), ಸಂಗನಗೌಡ ಹೇಗರೆಡ್ಡಿ, ಪ್ರೊ. ಚಂದ್ರಗೌಡ ಕುಲಕರ್ಣಿ ಕಾರ್ಯಕ್ರಮ ವೀಕ್ಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.