ಗುರುವಾರ , ಫೆಬ್ರವರಿ 25, 2021
17 °C
ದುಬೈ ಓಪನ್‌ ಟೆನಿಸ್‌: ನಿರಾಸೆ ಕಂಡ ಬೆರ್ಡಿಕ್

ರೋಜರ್‌ ಫೆಡರರ್‌ಗೆ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಜರ್‌ ಫೆಡರರ್‌ಗೆ ಕಿರೀಟ

ದುಬೈ (ಐಎಎನ್‌ಎಸ್‌): ವಿಶ್ವದ ಎಂಟನೇ ರ‍್ಯಾಂಕ್ ‌ನ ಆಟಗಾರ ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್ ಇಲ್ಲಿ ನಡೆದ ದುಬೈ ಡ್ಯೂಟಿ ಫ್ರೀ ಟೆನಿಸ್‌ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದಾರೆ.ಶನಿವಾರ ರಾತ್ರಿ ನಡೆದ ಫೈನಲ್‌ ಹಣಾಹಣಿಯಲ್ಲಿ ಫೆಡರರ್‌ 3–6, 6–4, 6–3ರಲ್ಲಿ ಜೆಕ್‌ ಗಣರಾಜ್ಯದ ಥಾಮಸ್‌ ಬೆರ್ಡಿಕ್‌ ಅವರನ್ನು ಸುಲಭವಾಗಿ ಸೋಲಿಸಿದರು.ಆಕ್ರಮಣಕಾರಿ ಆಟಕ್ಕೆ ಮುಂದಾದ ಬೆರ್ಡಿಕ್‌ ಪರಿಣಾ ಮಕಾರಿ ಹೊಡೆತಗಳ ಮೂಲಕ ಪಂದ್ಯದ ಮೊದಲ ಸೆಟ್‌ನಲ್ಲಿ ಜಯ ಪಡೆದರು. ಎರಡನೇ ಸೆಟ್‌ ಗೆದ್ದುಕೊಂಡ ಫೆಡರರ್‌ ಪಂದ್ಯದಲ್ಲಿ ಸಮಬಲ ಸಾಧಿಸಿದರು.ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ನಿರ್ಣಾಯಕ ಸೆಟ್‌ನಲ್ಲೂ ಫೆಡರರ್‌ ಮಿಂಚಿದರು. ಬಲಿಷ್ಠ ಸರ್ವ್‌ ಹಾಗೂ ರಿಟರ್ನ್‌ಗಳ ಮೂಲಕ ಗಮನಸೆಳೆದರು. ಅಂತಿಮ ಸೆಟ್‌ನಲ್ಲಿ ಬೆರ್ಡಿಕ್‌ ಕೊಂಚ ಪ್ರತಿರೋಧ ತೋರಿದರಾದರೂ ಅವರಿಗೆ ಗೆಲುವು ಒಲಿಯಲಿಲ್ಲ.ಇದು ವೃತ್ತಿಜೀವನದಲ್ಲಿ ಫೆಡರರ್‌ಗೆ ಒಲಿದ 78ನೇ ಪ್ರಶಸ್ತಿ. ಈ ಮೂಲಕ ಅವರು ಜಾನ್‌ ಮೆಕೆನ್ರೊ ಅವರನ್ನು ಹಿಂದಿಕ್ಕಿ ಅತಿ ಹೆಚ್ಚು ಪ್ರಶಸ್ತಿ ಪಡೆದ ವಿಶ್ವದ ಮೂರನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಜಿಮ್ಮಿ ಕಾನರ್ಸ್‌ (109) ಹಾಗೂ ಇವಾನ್‌ ಲೆಂಡ್ಲ್‌ (94) ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ಫೆಡರರ್‌ ಈ ಗೆಲುವಿನೊಂದಿಗೆ  ಬೆರ್ಡಿಕ್‌ ಎದುರಿನ ಜಯದ ಅಂತರವನ್ನು 12–6ಕ್ಕೆ ಹೆಚ್ಚಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.