ರೋಜರ್ ಫೆಡರರ್‌ಗೆ ಬೆದರಿಕೆ

7

ರೋಜರ್ ಫೆಡರರ್‌ಗೆ ಬೆದರಿಕೆ

Published:
Updated:
ರೋಜರ್ ಫೆಡರರ್‌ಗೆ ಬೆದರಿಕೆ

ಬೀಜಿಂಗ್ (ಎಪಿ): ವಿಶ್ವ ದಾಖಲೆಯ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳ ಒಡೆಯ ರೋಜರ್ ಫೆಡರರ್ ಅವರಿಗೆ ಜೀವ ಬೆದರಿಕೆ ಬಂದಿರುವ ಕಾರಣ ಇಲ್ಲಿ ನಡೆಯುತ್ತಿರುವ ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.`ಟೆನಿಸ್ ಆಟಗಾರ ಸ್ವಿಟ್ಜರ್ಲೆಂಡ್‌ನ ಫೆಡರರ್‌ಗೆ ಆನ್‌ಲೈನ್ ಮೂಲಕ ಕೊಲೆ ಬೆದರಿಕೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ಈ ಟೂರ್ನಿಯಲ್ಲಿ ಪಾಲ್ಗೊಂಡಿರುವ ಫೆಡರರ್‌ಗೆ ಭದ್ರತೆ ಹೆಚ್ಚಿಸಲಾಗಿದೆ~ ಎಂದು ಟೂರ್ನಿಯ ಅಧಿಕಾರಿ ಯಾಂಗ್ ಯಿಬಿನ್ ಹೇಳಿದ್ದಾರೆ ಎಂಬುದನ್ನು ಶಾಂಘೈ ಪತ್ರಿಕೆಯೊಂದು ವರದಿ ಮಾಡಿದೆ.ಫೆಡರರ್ ಅವರ ಅಭಿಮಾನಿಗಳ ವೆಬ್‌ಸೈಟ್ `ಬ್ಲೂ ಕ್ಯಾಟ್ ಪಾಲಿಥೆಸಿಮ್ ಫೌಂಡರ್ 07~ನಲ್ಲಿ ಅಪರಿಚಿತರು ಕೊಲೆ ಬೆದರಿಕೆ ಇರುವ ಸಂದೇಶವನ್ನು ಹರಿಬಿಟ್ಟಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಶಾಂಘೈ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry