ರೋಜರ್ ವಾಸೆಲಿನ್ ಜೊತೆಗೂಡಿ ಆಡಲಿರುವ ಪೇಸ್

7

ರೋಜರ್ ವಾಸೆಲಿನ್ ಜೊತೆಗೂಡಿ ಆಡಲಿರುವ ಪೇಸ್

Published:
Updated:

ಚೆನ್ನೈ (ಐಎಎನ್‌ಎಸ್): ಲಿಯಾಂಡರ್ ಪೇಸ್ ಅವರು ಮುಂಬರುವ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಫ್ರಾನ್ಸ್‌ನ ರೋಜರ್ ವಾಸೆಲಿನ್ ಜೊತೆಗೂಡಿ ಆಡಲಿದ್ದಾರೆ.ವಿಶ್ವ ಡಬಲ್ಸ್‌ನ ಮೂರನೇ ರ‌್ಯಾಂಕ್‌ನ ಆಟಗಾರ ಪೇಸ್ 2010 ಹಾಗೂ 2011ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದರು. 2010ರಲ್ಲಿ ಮಹೇಶ್ ಭೂಪತಿ ಹಾಗೂ 2012ರಲ್ಲಿ ಜಾಂಕೊ ತಿಪ್ಸಾರೆವಿಕ್ ಜೊತೆಗೂಡಿ ಈ ಸಾಧನೆ ಮಾಡಿದ್ದರು.2012ರಲ್ಲಿ ಲಿಯಾಂಡರ್ ಉತ್ತಮ ಸಾಧನೆ ಮಾಡಿದ್ದಾರೆ. ಈ ವರ್ಷ ಆಸ್ಟ್ರೇಲಿಯಾ ಓಪನ್ ಸೇರಿದಂತೆ ನಾಲ್ಕು ಪ್ರಶಸ್ತಿ ಜಯಿಸಿದ್ದಾರೆ. ವಾಸೆಲಿನ್ ಕೂಡ ಈ ವರ್ಷ ಮೂರು ಪ್ರಶಸ್ತಿ ಗೆದ್ದಿದ್ದಾರೆ. ಚೆನ್ನೈ ಓಪನ್ ಟೂರ್ನಿ ಡಿಸೆಂಬರ್ 31ರಿಂದ ಜನವರಿ 6ರವರೆಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry