ರೋಟರಿಯಿಂದ 7 ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ

7

ರೋಟರಿಯಿಂದ 7 ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ

Published:
Updated:

ಹೊಸಕೋಟೆ:  `ರೋಟರಿ ಜಿಲ್ಲೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ 7 ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ~ ಎಂದು ರೋಟರಿ ಜಿಲ್ಲಾ ಗವರ್ನರ್  ಆರ್.ಬದರೀಪ್ರಸಾದ್ ತಿಳಿಸಿದರು.ಹೊಸಕೋಟೆ ರೋಟರಿ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿ, `ತುಮಕೂರಿನಲ್ಲಿ ಒಂದು ಕೇಂದ್ರ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ~ ಎಂದರು.`ರೋಟರಿ ವತಿಯಿಂದ ಸೂರಿಲ್ಲದವರಿಗೆ 200 ಮನೆಗಳನ್ನು ಕಟ್ಟಿಕೊಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ~ ಎಂದರು. ರೋಟರಿ ಅಧ್ಯಕ್ಷ ಕೆ.ನಟರಾಜ್ ಅಧ್ಯಕ್ಷತೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry