ಬುಧವಾರ, ನವೆಂಬರ್ 20, 2019
20 °C

`ರೋಟರಿ ಅಧ್ಯಕ್ಷ ಸ್ಥಾನದಿಂದ ಹೆಚ್ಚಿದ ಹೊಣೆ'

Published:
Updated:

ನೆಲಮಂಗಲ: ರೋಟರಿ ಅಧ್ಯಕ್ಷನಾಗಿ ಅಧಿಕಾರ ಪಡೆಯುತ್ತಿಲ್ಲ, ಹಲವು ಗುರುತರ ಜವಾಬ್ಧಾರಿಗಳು ಹೆಗಲೇರಿವೆ ಎಂದು ಎ.ಎನ್.ಮಂಜುನಾಥ್ ತಿಳಿಸಿದರು.ಪಟ್ಟಣದ ಬಸವಣ್ಣದೇವರ ಮಠದಲ್ಲಿ ನೆಲಮಂಗಲ ರೋಟರಿ ಸಂಸ್ಥೆ ಏರ್ಪಡಿಸಿದ್ದ  ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಟಿ.ನಾಗರಾಜು ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದರು.ಹೊಲಿಗೆ ಯಂತ್ರ ವಿತರಣೆ, ಆರೋಗ್ಯ ಶಿಬಿರ, ಕುಡಿಯುವ ನೀರು, ಹೃದಯ ಶಸ್ತ್ರಚಿಕಿತ್ಸೆ ಹಾಗು ಇನ್ನಿತರೆ ಸೇವಾ ಕಾರ್ಯಕ್ರಮಗಳನ್ನು ನೀಡಲು ಈ ಅವಧಿಯಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.ನಿಕಟಪೂರ್ವ ಅಧ್ಯಕ್ಷ ಟಿ.ನಾಗರಾಜು, ಮಕ್ಕಳಿಗೆ ಎರಡು ಸಾವಿರ ಶಬ್ಧಕೋಶಗಳ ವಿತರಣೆ, ತೆರೆದ ಹೃದಯ ಶಸ್ತ್ರಚಿಕಿತ್ಸೆ, ಯಂಟಗಾನಹಳ್ಳಿ ಸರ್ಕಾರಿ ಕಾಲೇಜಿಗೆ ಸಾಮಗ್ರಿಗಳ ವಿತರಣೆ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಪೋಲಿಯೊ ಲಸಿಕೆ, ರೈತರಿಗೆ ಸೋಲಾರ್‌ಲ್ಯಾಂಪ್ ವಿತರಣೆ, ಹೈನುಗಾರಿಕೆಗೆ ಉತ್ತೇಜನ ನೀಡಿರುವುದಾಗಿ ವಾರ್ಷಿಕ ವರದಿ ವಾಚಿಸಿದರು.ಇಂದು ಕಾರ್ಯಕ್ರಮ : ಪಟ್ಟಣದ ವಿಶಾಲ ಆಂಗ್ಲ ಶಾಲೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನೂತನ ಸದಸ್ಯರ ಗುರುತಿನ ಚೀಟಿ ವಿತರಣಾ ಸಮಾರಂಭವನ್ನು ಬುಧವಾರ ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)