ರೋಟರಿ ಸಂಸ್ಥೆಯ 107ನೇ ವರ್ಷಾಚರಣೆ

7

ರೋಟರಿ ಸಂಸ್ಥೆಯ 107ನೇ ವರ್ಷಾಚರಣೆ

Published:
Updated:

ಕೊಳ್ಳೇಗಾಲ: ಸಮಾಜಸೇವೆ ಕೈಗೊಳ್ಳುವಲ್ಲಿ ರೋಟರಿ ಸಂಸ್ಥೆ ಯಶಸ್ಸು ಕಂಡಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎಂ.ನಂಜುಂಡಯ್ಯ ತಿಳಿಸಿದರು.ಪಟ್ಟಣದ ರೋಟರಿ ಭವನದಲ್ಲಿ ಗುರುವಾರ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ 107ನೇ ವರ್ಷಾಚರಣೆ ಅಂಗವಾಗಿ ರೋಟರಿ ಮಿಡ್-ಟೌನ್ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೈಯುಕ್ತಿಕ ಉದ್ದೇಶ ಈಡೇರಿಗಾಗಿ ಈಗ ಸಂಘ ಸಂಸ್ಥೆಗಳು ಹುಟ್ಟುತ್ತಿವೆ. ಅಂತಹ ಸಂಘಗಳಲ್ಲಿ ಸೇವೆಯ ಕೊರತೆ ಇದೆ ಎಂದು ಹೇಳಿದರು.ಪೋಲಿಯೊ ನಿರ್ಮೂಲನೆಗೆ ಕೋಟಿಗಟ್ಟಲೆ ಹಣವನ್ನು ರೋಟರಿ ಖರ್ಚು ಮಾಡುತ್ತಿದ್ದು, ವಿಶ್ವದೆಲ್ಲೆಡೆ ಮಾನವೀಯ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿದೆ ಎಂದರು. ರೋಟರಿ ಜಿಲ್ಲಾ ತರಬೇತುದಾರ ಕೆ.ಪುಟ್ಟರಸಶೆಟ್ಟಿ ಅವರು, 25 ವರ್ಷಗಳಲ್ಲಿ ರೋಟರಿ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು.ಮಾಜಿ ಅಧ್ಯಕ್ಷ ಎಸ್.ದೇವರಾಜು, ಟಿ.ಸಿ. ವೀರಭದ್ರಯ್ಯ ಶುಭಕೋರಿದರು. ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ರೋಟರಿ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.

ರಾಮದಾಸ್ ಮತ್ತು ತಂಡದವರು ಹಾಡುಗಾರಿಕೆ, ಟಿ.ಜಾನ್‌ಪೀಟರ್ ನಗೆ ಕಾರ್ಯಕ್ರಮ, ಮಕ್ಕಳ ನೃತ್ಯ ಮನರಂಜಿಸಿದವು.ರೋಟರಿ ಮಿಡ್‌ಟೌನ್ ಸಂಸ್ಥಾಪಕ ಅಧ್ಯಕ್ಷ ಪ್ರಭುಸ್ವಾಮಿ, ಕಾರ್ಯದರ್ಶಿ ಡೇವಿಡ್ ಫರ್ನಾಂಡಿಸ್, ಜೋನಲ್ ಲೆಫ್ಟಿನೆಂಟ್ ಶಿವಾನಂದ್, ರೋಟರಿ ಉಪಾಧ್ಯಕ್ಷ ದಿನೇಶ್‌ಗುಪ್ತ, ಎ.ಎಂ. ಮ್ಲ್ಲಲಿಕಾರ್ಜುನಯ್ಯ, ಸನಾವುಲ್ಲಾ, ಎಸ್.ನಾಗರಾಜು ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry