ಗುರುವಾರ , ಜೂನ್ 24, 2021
27 °C

ರೋಡಲಬಂಡ(ಯುಕೆಪಿ) ಗ್ರಾಪಂ ಅಧ್ಯಕ್ಷರಾಗಿ ರಾಮಣ್ಣ ಅವಿರೋಧ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ:  ರೋಡಲಬಂಡ (ಯುಕೆಪಿ) ಗ್ರಾಮ ಪಂಚಾಯಿತಿ ಅಧ್ಯಕ್ಷ ಲಿಂಗನಗೌಡ ಪೊಲೀಸ್ ಪಾಟೀಲ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಸಲಾಯಿತು.ಅಧ್ಯಕ್ಷ ಸ್ಥಾನಕ್ಕೆ ರಾಮಣ್ಣ ನಾಗಪ್ಪ ರೋಡಲಬಂಡ ಅವರ ಏಕೈಕ ನಾಮಪತ್ರ ಬಂದಿದ್ದರಿಂದ ಅವರು ಅವಿರೋಧ ಆಯ್ಕೆಯಾದರು.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ. ಮಹಾದೇವಯ್ಯ ಚುನಾವಣಾಧಿಕಾರಿಯಾಗಿದ್ದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.ಆಡಳಿತ ಮಂಡಳಿ ಪರವಾಗಿ ಇಒ ಹೂಮಾಲೆ ಹಾಕಿ ಅಭಿನಂದಿಸಿದರು. ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಬಸವರಾಜ, ಅಭಿವೃದ್ಧಿ ಅಧಿಕಾರಿ ಸಿದ್ಧನಗೌಡ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.ಅಭಿನಂದನೆ: ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ, ಗುಲಾಲ್ ಎರಚಿ ವಿಜಯೋತ್ಸವ ಆಚರಿಸಿದರು.

ಮುಖಂಡರಾದ ಬಸನಗೌಡ ನರಕಲದಿನ್ನಿ, ಅಯ್ಯಣ್ಣ ಉಪ್ಪೇರಿ, ದುರುಗಣ್ಣ ಗುರಿಕಾರ, ವಿರುಪಾಕ್ಷಪ್ಪ ನಾಡಗೌಡ್ರ, ಚಂದ್ರಶೇಖರ ಪಾಟೀಲ, ಜೂವಲೆಪ್ಪ ನಾಯ್ಕ, ಗಂಗಾಧರ ಮೇಟಿ, ಶರಣಗೌಡ ಪಾಟೀಲ, ಪರಶುರಾಮ ವಂದಾಲ, ಯಲ್ಲಪ್ಪ ಮೈಸೂರು,  ಮತ್ತಿತರರು ಅಭಿನಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.