ರೋಣ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾಗಿ ಅಂದಪ್ಪ ಅವಿರೋಧ ಆಯ್ಕೆ

7

ರೋಣ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾಗಿ ಅಂದಪ್ಪ ಅವಿರೋಧ ಆಯ್ಕೆ

Published:
Updated:

ರೋಣ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ  ಅಧ್ಯಕ್ಷರಾಗಿ ಅಂದಪ್ಪ ಶಾಂತಪ್ಪ ಸವದತ್ತಿ ಹಾಗೂ ಉಪಾಧ್ಯಕ್ಷರಾಗಿ ರುದ್ರಗೌಡ ನಿಂಗನಗೌಡ ಮಾಳಗೌಡ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅಂದಪ್ಪ ಸವದತ್ತಿ, ಗ್ರಾಮೀಣ ಜನರ ಬದುಕು ಹಸನಾದಾಗ ನಮ್ಮ ಹಳ್ಳಿಗಳ ಉದ್ದಾರವಾಗುತ್ತದೆ, ಗ್ರಾಮದಲ್ಲಿರುವ ರೈತರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ ನಾನು ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.ಬಿಜೆಪಿಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪಿ.ಸಿ. ಪಾಟೀಲ, ಗುರುರಾಜ ಕುಲಕರ್ಣಿ, ಅರ್ಜುನ ಕೊಪ್ಪಳ, ಡಾ. ಆನಂದ ಇನಾಮದಾರ, ಮುತ್ತಣ್ಣ ಲಿಂಗನಗೌಡ್ರ, ಶಿವಾನಂದ ಜಿಡ್ಡಿಬಾಗಿಲ, ಗದಿಗೆಪ್ಪ ಕಿರೆಸೂರ, ಶಿವಕುಮಾರ ಸಾಲಮನಿ, ಎಸ್.ಎಸ್. ಹಿರೇಮಠ, ಬಸವರಾಜ ರಂಗನಗೌಡ, ಬಸವರಾಜ ಮುದೋಳ, ಅಶೋಕ ಪವಾಡಶೆಟ್ಟರ, ವೀರಣ್ಣ ಯರಗೇರಿ, ಮಾರುತಿ ಕಲ್ಲೋಡ್ಡರ, ನಾಗೇಶ ಲಕ್ಕಲಕಟ್ಟಿ, ಐ.ಎಸ್. ಶೀಲವಂತರ, ಶಿವನಗೌಡ ಪೊಲೀಸ್‌ಪಾಟೀಲ, ಮಲ್ಲಪ್ಪ ಎಮ್ಮಿಯವರ ಸೇರಿದಂತೆ ಬ್ಯಾಂಕಿನ ಬಿಜೆಪಿ ಬೆಂಬಲಿತ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಪಿ.ಎಲ್. ಉಪನಾಳ ಸ್ವಾಗತಿಸಿದರು. ನಿಂಗಪ್ಪ ಹಕಾರಿ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry