ಶನಿವಾರ, ಫೆಬ್ರವರಿ 27, 2021
21 °C

ರೋಬೊಟಿಕ್ ಫೆಸ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಬೊಟಿಕ್ ಫೆಸ್ಟ್

ಬೆಂಗಳೂರಿನ ‘ನೋವೊಟೆಕ್ ರೋಬೊ’ ಸಂಸ್ಥೆ, ಅಮೆರಿಕದ ಮಿಚಿಗನ್‌ನ ಲಾರೆನ್ಸ್ ಟೆಕ್ನಾಲಜಿ ವಿಶ್ವವಿದ್ಯಾಲಯದ ‘ರೋಬೊಫೆಸ್ಟ್’ ವಿಭಾಗದ ಜತೆಗೂಡಿ ಕನಕಪುರ ರಸ್ತೆ (ಮೆಟ್ರೊ ಹಿಂಭಾಗ) ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ‘ರೋಬೊಟಿಕ್ ಫೆಸ್ಟಿವಲ್’ ಆಯೋಜಿಸಿತ್ತು. ಯುವ ಮನಸ್ಸುಗಳಲ್ಲಿ ಸ್ಪರ್ಧೆಯನ್ನು ಉತ್ತೇಜಿಸುವುದು, ಯಂತ್ರಗಳ ಮೇಲೆ ಮಾನವ ಹೇಗೆ ನಿಯಂತ್ರಣ ಸಾಧಿಸಬಹುದು ಎಂಬುದನ್ನು ತಿಳಿಸಿಕೊಡುವುದೇ ಈ ’ರೋಬೊ ಫೆಸ್ಟ್’ನ ಮುಖ್ಯ ಉದ್ದೇಶವಾಗಿತ್ತು.ಇಲ್ಲಿ ಪ್ರದರ್ಶಿಸಲಾದ ಯಂತ್ರಮಾನವ ಮಾದರಿಗಳಲ್ಲಿ ಕೆಲವು ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳುವ, ವಿವೇಚನೆ ನಡೆಸಿ ಕೆಲಸ ನಿರ್ವಹಿಸುವ ಸಾಮರ್ಥ್ಯದವೂ ಇದ್ದವು. ರೋಬೊ ಫೆಸ್ಟ್‌ನಲ್ಲಿ ಭಾಗವಹಿಸುವ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ (ಎಸ್‌ಟಿಇಎಂ) ಹಾಗೂ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ (ಐಸಿಟಿ) ಕಲಿಯುವುದರ ಜತೆಗೇ ಮನರಂಜನೆಯನ್ನೂ ಪಡೆದುಕೊಂಡರು. ಅಷ್ಟೆ ಅಲ್ಲದೆ, ಇಲ್ಲಿ ವಿದ್ಯಾರ್ಥಿಗಳು ರೋಬೊ ವಿನ್ಯಾಸ, ಕಾಯತಂತ್ರ ಅಭಿವೃದ್ಧಿ, ರೋಬೊಗಳಿಗೆ ಆದೇಶ, ವಿನ್ಯಾಸ ಮೊದಲಾದವನ್ನೂ ಕಲಿತರು.ಈ ಸ್ಪರ್ಧೆಯಲ್ಲಿ ನಗರದ ವಿವಿಧ ಶಾಲೆ-, ಕಾಲೇಜುಗಳ ೫ರಿಂದ ೮ನೇ ತರಗತಿ ಮತ್ತು ೯ರಿಂದ ೧೨ನೇ ತರಗತಿ ವಿದ್ಯಾರ್ಥಿಗಳು ರೋಬೊಟ್ ಮಾದರಿ ಪ್ರದರ್ಶಿಸಿದರು. ಅಲ್ಲದೇ ಎಂಜಿನಿಯರಿಂಗ್ ವಿದ್ಯಾರ್ಥಿಗಳೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.