ರೋಬೋ ಟೀಚರ್...

7

ರೋಬೋ ಟೀಚರ್...

Published:
Updated:
ರೋಬೋ ಟೀಚರ್...

ಶಾಲಾ ಕೊಠಡಿಗಳಿಗೂ ರೋಬೋಟ್‌ಗಳು ನುಗ್ಗಿವೆ. ಮಾನವನನ್ನೇ ಹೋಲುವ ರೋಬೋಟ್‌ಗಳು ಮಧ್ಯಪೂರ್ವ ರಾಷ್ಟ್ರಗಳಲ್ಲಿ ತರಗತಿಗಳಿಗೆ ಶಿಕ್ಷಕರಾಗಿ ಪ್ರವೇಶ ಪಡೆದಿವೆ. ಕೇವಲ ಶಾಲಾ ತರಗತಿಗಳಿಗೆ ಮಾತ್ರವಲ್ಲ, ಇಲ್ಲಿನ ಸಂಶೋಧನಾ ಸಂಸ್ಥೆಗಳಲ್ಲಿಯೂ ರೋಬೋಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.

 

ಶಿಕ್ಷಣ ವಿಧಾನದಲ್ಲಿ ಕ್ರಾಂತಿಯನ್ನು ತರಲು ಅದರಲ್ಲೂ ಮುಖ್ಯವಾಗಿ ವಿಜ್ಞಾನ ಮತ್ತು ಗಣಿತ ವಿಷಯದ ಬೋಧನೆಗೆ ರೋಬೋಟ್‌ಗಳನ್ನು ಬಳಸಲು ಅಲ್ಲಿನ  ಶಾಲೆಗಳು ನಿರ್ಧರಿಸಿವೆ.ಫ್ರಾನ್ಸ್‌ನ ಆಲ್ಡೆಬರಾನ್ ರೋಬೋಟಿಕ್ಸ್ ಎಂಬ ಕಂಪನಿ `ಇಂಟೆಲ್~ ಕಂಪೆನಿಯ ಸಹಯೋಗದೊಂದಿಗೆ ಮಾನವನನ್ನೇ ಹೋಲುವ `ನಾವೊ~ ರೋಬೋಟ್‌ಗಳನ್ನು ನಿರ್ಮಿಸಿದೆ. ಇವುಗಳು ತರಗತಿ ಕೊಠಡಿಯೊಳಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.ಈ ರೋಬೋಟ್‌ಗಳ ಬಳಕೆಯನ್ನು ಹಂತಹಂತವಾಗಿ ಕಲಿಯುವ ಮೂಲಕ ಅದರ ಫಲಪ್ರದ ಬಳಕೆ ಸಾಧ್ಯ ಎನ್ನುತ್ತಾರೆ ಕಂಪನಿ ಅಧಿಕಾರಿಗಳು. ಅಂತೆಯೇ ಇಂಜಿನಿಯರಿಂಗ್ ಮತ್ತು ವಿಜ್ಞಾನ ತರಗತಿಗಳಲ್ಲಿ ಇದರ ಬಳಕೆ ಹೆಚ್ಚು ಎನ್ನುತ್ತಾರೆ ಅವರು.`ಹತ್ತು ವರ್ಷಗಳ ಹಿಂದೆ ಕಲಿಕೆಯಲ್ಲಿ ಕಂಪ್ಯೂಟರ್ ಅನ್ನು ಬಳಸಬಹುದೆಂದಾಗ ಅದನ್ನು ಯಾರೂ ನಂಬುತ್ತಿರಲಿಲ್ಲ. ಆದರೆ ಇಂದು ಕಂಪ್ಯೂಟರ್ ಕಲಿಕೆಯ ಭಾಗವಾಗಿ ಮಾರ್ಪಟ್ಟಿದೆ. ಅಂತೆಯೇ ಮುಂಬರುವ ವರ್ಷಗಳಲ್ಲಿ ಕಂಪ್ಯೂಟರ್‌ನಂತೆಯೇ ರೋಬೋಟ್‌ಗಳೂ ತರಗತಿ ಕೊಠಡಿಗಳ ಅವಿಭಾಜ್ಯ ಅಂಗವಾಗಿ ಮಾರ್ಪಡಲಿವೆ.ಭವಿಷ್ಯದ ಎಲ್ಲಾ ಎಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ಸಂಶೋಧಕರು ರೋಬೋಟ್‌ನೊಂದಿಗೆ ಮತ್ತು ರೋಬೋಟ್ ಜತೆಗೆ ಕಲಿಯುವುದರ ಲಾಭವನ್ನು ಪಡೆಯಲಿದ್ದಾರೆ~ ಎಂದು ಅಲ್ಡೆಬರಾನ್ ರೋಬೋಟಿಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬ್ರೂನ್ ಮೇಸನೀರ್ ಅಭಿಪ್ರಾಯಪಡುತ್ತಾರೆ.

 

ಈ ಮಾದರಿ ರೋಬೋಗಳು ಕೇವಲ ನಾಲ್ಕು ವರ್ಷಗಳವರೆಗೆ ಮಾತ್ರ ಕಾರ್ಯನಿರ್ವಹಿಸಲಿದೆಯಾದರೂ ಜಗತ್ತಿನ ಸುಮಾರು 450 ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಸುಮಾರು 1500 ಇಂತಹ ರೋಬೋ ಮಾದರಿಗಳನ್ನು ಈಗಾಗಲೇ ಮಾರಲಾಗಿದೆ.ಈ ಯಶಸ್ಸಿನಿಂದ ಪ್ರೇರಣೆಗೊಂಡ ಇಂಟೆಲ್ ಇದೇ ರೋಬೋಟ್ ಅನ್ನು ಉನ್ನತ ಶಿಕ್ಷಣದ ಕ್ಷೇತ್ರದ ಬಳಕೆಗೆ ತಕ್ಕಂತೆ ಅಭಿವೃದ್ಧಿಪಡಿಲು ನಿರ್ಧರಿಸಿದೆ.ಹಾರ್ವರ್ಡ್, ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯಗಳು ಸೇರಿದಂತೆ ವಿಶ್ವದ ಹಲವು ಖ್ಯಾತ ವಿಶ್ವವಿದ್ಯಾಲಯಗಳು ಮತ್ತು ಪ್ರಯೋಗಾಲಯಗಳು ಇದೀಗ `ನಾವೊ~ ರೋಬೋಟ್ ಅನ್ನು ಬಳಸುತ್ತಿವೆ.  ಸದ್ಯ ಸಂಶೋಧನೆ ಮತ್ತು ಕಲಿಕೆಯಲ್ಲಿ ಮಾತ್ರ ರೋಬೋಟ್ ಅನ್ನು ಬಳಸಲಾಗುತ್ತಿದ್ದರೂ ಮುಂಬರುವ ವರ್ಷಗಳಲ್ಲಿ ಈ ರೋಬೋಟ್‌ಗಳನ್ನು ಬುದ್ಧಿಮಾಂದ್ಯ ಮಕ್ಕಳ ಆರೈಕೆಗೂ ಬಳಸುವ ಕುರಿತು ಯೋಚನೆಗಳು ನಡೆಯುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry