ಬುಧವಾರ, ಜೂನ್ 23, 2021
30 °C

ರೋಬೋ ತಂತ್ರಜ್ಞಾನಕ್ಕೆ ವಿದ್ಯಾರ್ಥಿಗಳ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಬೋ ತಂತ್ರಜ್ಞಾನಕ್ಕೆ ವಿದ್ಯಾರ್ಥಿಗಳ ಸ್ಪರ್ಶ

ಜೇಮ್ಸಬಾಂಡ್ ಚಿತ್ರಗಳಲ್ಲಿ ನೋಡುವ ಚಾಲಕರಿಲ್ಲದ ರಿಮೋಟ್ ಕಾರ್, ನಾಸಾ ವೆಬ್‌ಸೈಟ್‌ನಲ್ಲಿ ಕಾಣಸಿಗುವ ಚಂದ್ರನ ಮೇಲೆ ಓಡಾ ಡುತ್ತಾ ಫೋಟೋ ತೆಗೆಯುವ ಮಾನವ ರಹಿತ ವಾಹನಗಳನ್ನು ನೋಡಿ `ಇದು ಸಾಧ್ಯವೇ?~ ಎಂದು ಆಶ್ಚರ್ಯ ಪಡುವುದು ಸಾಮಾನ್ಯ.ವಿದ್ಯಾರ್ಥಿ ಸಮೂಹದ ಈ ಪ್ರಶ್ನೆಗೆ `ಇದು ಖಂಡಿತಾ ಸಾಧ್ಯ, ನೀವೇ ಮಾಡಿನೋಡಿ, ನಂತರ ನಂಬಿ~ ಎಂಬ ಉತ್ತರ ನೀಡಿದ್ದು ತುಮಕೂರಿನ ಎಚ್‌ಎಂಎಸ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಈಚೆಗೆ ನಡೆದ `ರೋಬೋ ಓ ಪಸ್~ ತಾಂತ್ರಿಕ ಕಾರ್ಯಾಗಾರ.ದೆಹಲಿಯ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ರೋಬೋ ಸಪೈನ್ಸ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಎಚ್‌ಎಂಎಸ್ ಕಾಲೇಜಿನಲ್ಲಿ ಈಚೆಗೆ ನಡೆದ ಕಾರ್ಯಾಗಾರ ಹಲವು ಭವಿಷ್ಯದ ರೋಬೋ ತಂತ್ರಜ್ಞರ ಪ್ರತಿಭೆಗೆ ಸಾಣೆ ಹಿಡಿಯಿತು.ಒಟ್ಟು ಎರಡು ದಿನಗಳ ಕಾಲ ನಡೆದ ಈ ಮಹತ್ವದ ಕಾರ್ಯಾಗಾರದಲ್ಲಿ ಮೊದಲ ದಿನ ದೆಹಲಿಯಿಂದ ಆಗಮಿಸಿದ್ದ ತಜ್ಞರು ಎಚ್‌ಎಂಎಸ್ ವಿದ್ಯಾರ್ಥಿಗಳಿಗೆ ರೊಬೊಟಿಕ್ ತಂತ್ರಜ್ಞಾನದ ಮೂಲ ಸಿದ್ಧಾಂತಗಳು, ವಿವಿಧ ಕ್ಷೇತ್ರಗಳಲ್ಲಿ ಅದರ ಬಳಕೆ, ವೈವಿಧ್ಯಮಯ ವಿನ್ಯಾಸಗಳು, ಕಾರ್ಯಾ ಚರಣೆಗೆ ಬಳಕೆಯಾಗುವ ಪ್ರೋಗ್ರಾಮಿಂಗ್  ಸಾಫ್ಟ್‌ವೇರ್ ಕುರಿತು ವಿವರಣೆ ನೀಡಿದರು.ಎರಡನೆ ದಿನ ಪ್ರಾಯೋಗಿಕ ಕಮ್ಮಟಗಳು ನಡೆದವು. ವಿದ್ಯಾರ್ಥಿಗಳಿಗಾಗಿ ರೋಬೋ ವಿನ್ಯಾಸ ಮತ್ತು ಕಾರ್ಯಾಚರಣೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರೋಬೋಟಿಕ್ಸ್‌ನ `ಪಾತ್ ಫೈಂಡರ್ ಅನಾಲಿಸಿಸ್~ (ದಾರಿ ಹುಡುಕುವ ರೋಬೋ) ವಿಷಯದ ಮೇಲೆ ಸಮಯ, ವೇಗ ಮತ್ತು ದಿಕ್ಕು ಕುರಿತ ಪರಿಕಲ್ಪನೆಗಳ ಮೇಲೆ ವಿದ್ಯಾರ್ಥಿಗಳು ಪ್ರಯೋಗ ಪ್ರಸ್ತುತಪಡಿಸಿದರು.

ಬಿಳಿ ಬಣ್ಣದ ವೇದಿಕೆಯ ಮೇಲೆ ಕಪ್ಪು ಬಣ್ಣದಲ್ಲಿ ಗಿ ಚಿಹ್ನೆ ಬರೆದು ಅದನ್ನು ಮಾರ್ಗ ಎಂದು ಪರಿಗಣಿಸಿ ಅದರ ಮೇಲೆ ಸಂಚರಿಸುವಂತೆ ರೋಬೋ ವಿನ್ಯಾಸ ಮಾಡುವಂತೆ ಮತ್ತು ಕಾರ್ಯಾಚರಿಸುವಂತೆ `ಸಿ~ ಮತ್ತು `ಎಂಬೆಡೆಡ್ ಸಿ~ ಪ್ರೋಗ್ರಾಂ ಭಾಷೆಯಲ್ಲಿ ಪ್ರೋಗ್ರಾಮಿಂಗ್ ಸಿದ್ಧಪಡಿಸುವಂತೆ ವಿದ್ಯಾರ್ಥಿಗಳಿಗೆ ಸವಾಲು ಹಾಕಲಾಯಿತು. ತಂಡವೊಂದು ವಿನ್ಯಾಸ ಮಾಡಿದ ರೋಬೋ ನಿರ್ದಿಷ್ಟ ಮಾರ್ಗದಿಂದ ತುಸುವೇ ಆಚೀಚೆ ಸಂಚರಿಸಿದರೂ ಆ ತಂಡ ಸ್ಪರ್ಧೆಯಿಂದ ಹೊರಗೆ ಹೋಗಬೇಕಾಗಿತ್ತು.ಈ ಸವಾಲಿನಲ್ಲಿ ಎಚ್‌ಎಂಎಸ್ ಕಾಲೇಜಿನ ಜೋಬೀಶ್ ಜೋಸೆಫ್, ಸಲಾಹುದ್ದೀನ್, ಪ್ರವೀಣ್‌ರಾವ್, ಎಸ್.ಆರ್.ಚೇತನ, ಜಿ.ಹರೀಶ್, ಲವಣ್‌ಕುಮಾರ್, ಮಲ್ಲಿಕಾರ್ಜುನ ಮತ್ತು ಮಂಜುನಾಥ್ ಗೆಲುವಿನ ನಗೆ ಚೆಲ್ಲಿದರು. ದೆಹಲಿಯಲ್ಲಿ ನಡೆಯುವ ಅಂತಿಮ ಸುತ್ತಿನ ಸ್ಪರ್ಧೆಗಾಗಿ ಈ ಅಭ್ಯರ್ಥಿಗಳನ್ನು ಕಾಲೇಜಿನ ವತಿಯಿಂದ ದೆಹಲಿ ಐಐಟಿಗೆ ಕಳುಹಿಸಲಾಯಿತು. ಎಚ್‌ಎಂಎಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಎಸ್.ಷಫಿ ಅಹ್ಮದ್, ನಿರ್ದೇಶಕ ಡಾ.ಎಸ್.ರಫೀಕ್ ಅಹ್ಮದ್, ಪ್ರಾಚಾರ್ಯ ಡಾ.ಟಿ.ಆರ್.ಜಗದೀಶ್, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ನೂರಾರು ವಿದ್ಯಾರ್ಥಿಗಳು `ರೊಬೊ ಓಪಸ್~ ಕಾರ್ಯಾಗಾರವನ್ನು ಸವಿದರು.

ರೊಬೊಟಿಕ್ ತಂತ್ರಜ್ಞಾನದ ಪ್ರಾಮುಖ್ಯತೆ ಮತ್ತು ಇತ್ತೀಚಿನ ಬೆಳವಣಿಗೆ ವಿವರಿಸಿದ ಎಚ್‌ಎಂಎಸ್ ಶಿಕ್ಷಣ ಸಂಸ್ಥೆಯ ಎಲೆಕ್ಟ್ರಾನಿಕ್ ವಿಭಾಗದ ಮುಖ್ಯಸ್ಥೆ ಲತಾ, ವಿದ್ಯಾರ್ಥಿಗಳು ರೊಬೊಟಿಕ್ ತಂತ್ರಜ್ಞಾನ ಕರಗತ ಮಾಡಿಕೊಳ್ಳಲು ಹೆಚ್ಚು ಲಕ್ಷ್ಯ ವಹಿಸುತ್ತಿದ್ದಾರೆ. ಪ್ರತಿ ಬ್ಯಾಚ್‌ನಲ್ಲಿ 5ರಿಂದ 10 ಪ್ರಾಜೆಕ್ಟ್‌ಗಳು ರೊಬೊಟಿಕ್‌ಗಳ ಮೇಲೆ ಸಿದ್ಧವಾಗುತ್ತಿವೆ ಎಂದರು.ರೈತನೊಬ್ಬನ ಹೊಲದಲ್ಲಿ ನಿರ್ದಿಷ್ಟ ಅಂತರದಲ್ಲಿ ಬಿತ್ತನೆ ಬೀಜ ಚೆಲ್ಲುವ `ಸೀಡ್ ಸೋಯಿಂಗ್~, ಹೊಲದಲ್ಲಿನ ತೇವಾಂಶ ಕುರಿತ ಮಾಹಿತಿ ನೀಡುವ `ಹ್ಯುಮಿಡಿಟಿ ಟೆಸ್ಟಿಂಗ್~, ಶತ್ರುವಿನ ನೆಲೆಗೆ ನುಗ್ಗಬಲ್ಲ `ಪಾತ್‌ಫೈಂಡರ್~, ಅತಿ ಹೆಚ್ಚಿನ ಉಷ್ಣಾಂಶ ಮತ್ತು ವಿಕಿರಣದ ಸ್ಥಳಗಳಲ್ಲಿ ಬಳಕೆಯಾಗುವ ವಿಶೇಷ ಪ್ರೋಗ್ರಾಮಿಂಗ್‌ನ ರೋಬೋ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಅಭಿಪ್ರಾಯಪಟ್ಟರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.