ಮಂಗಳವಾರ, ಅಕ್ಟೋಬರ್ 15, 2019
26 °C

ರೋಮಾಂಚನಕಾರಿ ಪ್ರದರ್ಶನ

Published:
Updated:

ಜನಸೇವಾ ವಿದ್ಯಾಕೇಂದ್ರದ ವಾರ್ಷಿಕೋತ್ಸವ ಸಮಾರಂಭ ಈಚೆಗೆ ಅದ್ದೂರಿಯಾಗಿ ನಡೆಯಿತು.ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಮುದನೀಡಿದರೆ, ಮಲ್ಲಕಂಬ, ಹಗ್ಗದ ಮಲ್ಲಕಂಬ ಪ್ರದರ್ಶನ, ತಂತಿ ಮೇಲಿನ ನಡಿಗೆ, ಫೈರ್ ಜಂಪ್ ರೋಮಾಂಚನ ಹುಟ್ಟಿಸಿತು. ಈ ಸಂದರ್ಭದಲ್ಲಿ ವಾರ್ಷಿಕ ಸಂಚಿಕೆ ವಿದ್ಯಾಶ್ರೀ ಬಿಡುಗಡೆ ಮಾಡಲಾಯಿತು.ಕ್ರೀಡಾಕೂಟ ಹಾಗೂ ಮತ್ತಿತರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸೂರ್ಯ ರೋಶನಿ ಲಿಮಿಟೆಡ್ ಅಧ್ಯಕ್ಷ ಜಯಪ್ರಕಾಶ್ ಅಗರವಾಲ್ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಎಂ.ದೇವಪ್ರಕಾಶ್, ಕೆ.ವಿ.ರಮೇಶ್, ಟಿ.ಎಸ್.ಸತೀಶ್, ಎಂ.ಶಶಿಧರ್ ಅತಿಥಿಗಳಾಗಿ ಭಾಗವಹಿಸಿದ್ದರು.

Post Comments (+)