ಮಂಗಳವಾರ, ನವೆಂಬರ್ 19, 2019
22 °C

ರೋಮಾಂಚನ ಮೂಡಿಸಿದ ಕೆಸರು ಗದ್ದೆ ರ‌್ಯಾಲಿ

Published:
Updated:

ಸಿದ್ದಾಪುರ: ಇಲ್ಲಿಗೆ ಸಮೀಪದ ಅಮ್ಮತ್ತಿ ಜೂಮರ್ಸ್‌ ತಂಡದವರು ಶನಿವಾರ ಏರ್ಪಡಿಸಿದ್ದ ಮಡ್ ಸ್ಕಿಪ್ಪರ್ಸ್‌ ರ‌್ಯಾಲಿ ಸಾರ್ವಜನಿಕರನ್ನು ರೋಮಾಂಚನಗೊಳಿಸಿತು.ಅಮ್ಮತ್ತಿ ಸಮೀಪದ ಗದ್ದೆಯಲ್ಲಿ ನಿರ್ಮಿಸಲಾದ ಕೆಸರು ಗದ್ದೆಯಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಹಲವು ವಾಹನ ಚಾಲಕರು ಸಾಹಸ ಪ್ರದರ್ಶಿಸಿದರು. ಕೆಸರು ಗದ್ದೆಯಲ್ಲಿ ಏರು- ತಗ್ಗುಗಳ ಮೇಲೆ ಹಾರುತ್ತ, ಮುನ್ನುಗ್ಗುತ್ತಿದ್ದ ಗಾಡಿಗಳನ್ನು ನೋಡಲು ನೂರಾರು ಜನ ಸೇರಿದ್ದರು.ಪೆಟ್ರೋಲ್‌ಚಾಲಿತ ವಾಹನಗಳ ವಿಭಾಗದಲ್ಲಿ 3.40 ನಿಮಿಷದಲ್ಲಿ ಗುರಿ ತಲುಪಿದ ಹಾಸನದ ಅಶ್ವಿನ್ ಪ್ರಥಮ ಸ್ಥಾನ ಪಡೆದರು. ಅವಿನ್ ನಂಜಪ್ಪ (3.43 ನಿಮಿಷ) ದ್ವಿತೀಯ ಹಾಗೂ ಆತೂರಿನ ಮಿಟ್ಟು ಗಣಪತಿ (4.45 ನಿಮಿಷ) ತೃತೀಯ ಬಹುಮಾನ ಪಡೆದುಕೊಂಡರು.ಡೀಸೆಲ್‌ಚಾಲಿತ ವಾಹನಗಳ ವಿಭಾಗದಲ್ಲಿ 3.30 ನಿಮಿಷದಲ್ಲಿ ಗುರಿ ಮುಟ್ಟಿದ ಕೊಂಗೆಟಿರ ಬೋಪಯ್ಯ ಪ್ರಥಮ ಸ್ಥಾನ ಪಡೆದರು.

ಮಿಟ್ಟು ಗಣಪತಿ (3.41 ನಿಮಿಷ) ದ್ವಿತೀಯ ಹಾಗೂ ಕಿಶನ್ ಮಾಚಯ್ಯ (3.45 ನಿಮಿಷ) ತೃತೀಯ ಬಹುಮಾನ ಪಡೆದುಕೊಂಡರು.ಮುಕ್ತ ವಿಭಾಗದಲ್ಲಿ ಅವಿನ್ ನಂಜಪ್ಪ (7.07 ನಿಮಿಷ) ಪ್ರಥಮ, ಅಶ್ವಿನ್ ಹಾಸನ (7.09 ನಿಮಿಷ) ದ್ವಿತೀಯ ಹಾಗೂ ಬಾಳೆಲೆಯ ಪೂಣಚ್ಚ (7.19 ನಿಮಿಷ) ತೃತೀಯ ಬಹುಮಾನ ಪಡೆದರು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನಡಿಕೇರಿಯಂಡ ರಮೇಶ್ ಅಣ್ಣಯ್ಯ, ಅಚ್ಚಪಂಡ ಮಹೇಶ್, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕಂಡ ಬೋಸ್ ದೇವಯ್ಯ, ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಬೆಳೆಗಾರರಾದ ಮುಳ್ಳೆರ ಶಿಜು ಜೋಯಪ್ಪ, ಜೂಮರ್ಸ್‌ ಅಧ್ಯಕ್ಷ ಸಚಿನ್ ಬೋಪಣ್ಣ, ಕುಙಂಡ ಮಹೇಶ್ ಅಪ್ಪಯ್ಯ, ಮೊಳ್ಳೆರ ಹರ್ಷ, ಮುಂತಾದವರು ಹಾಜರಿದ್ದರು.

ಪ್ರತಿಕ್ರಿಯಿಸಿ (+)