ರೋಯಿಂಗ್: ಭಾರತಕ್ಕೆ 8 ಪದಕ

7

ರೋಯಿಂಗ್: ಭಾರತಕ್ಕೆ 8 ಪದಕ

Published:
Updated:

ನವದೆಹಲಿ (ಪಿಟಿಐ): ಭಾರತ ತಂಡದವರು ದಕ್ಷಿಣ ಕೊರಿಯಾದ ಹಾಚಿಯೋನ್‌ನಲ್ಲಿ ನಡೆದ 14ನೇ ಸೀನಿಯರ್ ಹಾಗೂ 17ನೇ ಜೂನಿಯರ್ ಏಷ್ಯಾ ರೋಯಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನದ ಪದಕ ಸೇರಿದಂತೆ ಒಟ್ಟು 8 ಪದಕ ಜಯಿಸಿದ್ದಾರೆ.ಲೈಟ್‌ವೇಟ್ ಡಬಲ್ ಸ್ಕಲ್ಲರ್ಸ್ ಶೋಕೇಂದರ್ ತೊಮರ್ ಹಾಗೂ ಸೋನು ಲಕ್ಷ್ಮನಾರಾಯಣ್   ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಹಾಂಗ್‌ಕಾಂಗ್, ದಕ್ಷಿಣ ಕೊರಿಯಾ ಹಾಗೂ ಚೀನಾ ತಂಡಗಳನ್ನು ಸೋಲಿಸುವಲ್ಲಿ ಅವರು ಮಹತ್ವದ ಪಾತ್ರ ನಿಭಾಯಿಸಿದರು. ಹಾಗಾಗಿ ಭಾರತ ಒಂದು ಚಿನ್ನ, 5 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆಲ್ಲಲು ಸಾಧ್ಯವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry