ರೋಲ್ ಗುಳುಂ

7

ರೋಲ್ ಗುಳುಂ

Published:
Updated:
ರೋಲ್ ಗುಳುಂ

ಕೋರಮಂಗಲದ ಫೊರಂನಲ್ಲಿ ಕಾಟಿ ಝೋನ್ ಏರ್ಪಡಿಸಿದ್ದ `ಚೌಡೌನ್ ಶೋಡೌನ್~ ರೋಲ್ (ಸುರುಳಿಯಾಕಾರದ ತಿನಿಸು) ತಿನ್ನುವ ಸ್ಪರ್ಧೆ ರೋಮಾಂಚಕಾರಿಯಾಗಿತ್ತು.ಕ್ರೈಸ್ಟ್ ಕಾಲೇಜು, ಬಾಲ್ಡ್‌ವಿನ್, ಸೆಂಟ್ ಜೋಸೆಫ್ಸ್, ಜೈನ್, ಕೆಥೆಡ್ರೆಲ್ ಮತ್ತು ವಿಜ್‌ಟೂನ್ಸ್ ಮೀಡಿಯಾ ಅಂಡ್ ಅನಿಮೇಷನ್ ಅಕಾಡೆಮಿ ಕಾಲೇಜಿನ 12 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ವಿಜ್‌ಟೂನ್ಸ್‌ನ ಅಣ್ಣಪ್ಪ, ಚೆನ್ನಕೇಶವ ಮತ್ತು ಶಿವರಾಜ್ ಅವರನ್ನು ಒಳಗೊಂಡ ತಂಡ 3 ರೋಲ್‌ಗಳನ್ನು ಅತಿ ಕಡಿಮೆ ಸಮಯದಲ್ಲಿ (4.26 ನಿಮಿಷ) ತಿಂದು `ಅಲ್ಟಿಮೇಟ್ ಬಿಂಜ್ ಟ್ರೋಫಿ~  ಮತ್ತು 5 ಸಾವಿರ ರೂ ನಗದು ಬಹುಮಾನಕ್ಕೆ ಪಾತ್ರವಾಯಿತು. ಇದಕ್ಕೂ ಮುನ್ನ ವಿಜೇತ ತಂಡ ಮೂರು ಕಠಿಣ ಸುತ್ತುಗಳನ್ನು ಯಶಸ್ವಿಯಾಗಿ ಎದುರಿಸಿತ್ತು. ಅತಿಥಿಯಾಗಿದ್ದ ನಟ ತರುಣ್ ಸ್ಪರ್ಧಿಗಳನ್ನೆಲ್ಲ ಹುರಿದುಂಬಿಸಿದರು.ಇದರ ಜತೆಜತೆಗೇ ಕಾಟಿ ಝೋನ್ ಫೇಸ್‌ಬುಕ್‌ನಲ್ಲಿ ವಿಶಿಷ್ಟ ಅಪ್ಲಿಕೇಷನ್ ಪ್ರಾರಂಭಿಸಿ ಅಭಿಮಾನಿಗಳು ಚೌಡೌನ್ ಶೋಡೌನ್ ಸವಾಲನ್ನು ಆನ್‌ಲೈನ್‌ನಲ್ಲಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದೆ. ಇಲ್ಲಿ ನೋಂದಣಿ ಮಾಡಿಕೊಂಡು ತಮ್ಮ ಗೆಳೆಯ, ಗೆಳತಿಗೆ ಸವಾಲು ಹಾಕಬಹುದು. ದಿನ, ಸಮಯ ಮತ್ತು  ಸ್ಥಳವನ್ನೂ ಆಯ್ಕೆ ಮಾಡಿಕೊಳ್ಳಬಹುದು. ನಾಲ್ಕು ವಾರಾಂತ್ಯ ಇಂದಿರಾನಗರ ಮತ್ತು ಚರ್ಚ್ ಸ್ಟ್ರೀಟ್‌ನ ಕಾಟಿ ಝೋನ್ ಮಳಿಗೆಗಳಲ್ಲಿ ಸ್ಪರ್ಧೆ ನಡೆಯಲಿದ್ದು ವಿಜೇತರಿಗೆ ಗಿಫ್ಟ್ ವೋಚರ್ ದೊರೆಯಲಿದೆ.ಮಾಹಿತಿಗೆ: http://www.facebook.com/KaatiZone 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry