ರೋವರ್ಸ್ ಶುಭಾರಂಭ

7
ರಾಜ್ಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್

ರೋವರ್ಸ್ ಶುಭಾರಂಭ

Published:
Updated:

ಶಿವಮೊಗ್ಗ: ಧಾರವಾಡದ ರೋವರ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್‌ನವರು ಇಲ್ಲಿ ಶಿವಮೊಗ್ಗ ಯೂತ್ಸ್ ಆಶ್ರಯದಲ್ಲಿ ನಡೆಯುತ್ತಿರುವ ಅಸೋಸಿಯೇಷನ್ ಕಪ್ ರಾಜ್ಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿತು.ಮಂಗಳವಾರ ನಡೆದ ತಮ್ಮ ಮೊದಲ ಪಂದ್ಯದಲ್ಲಿ ರೋವರ್ಸ್ 47-32ರಿಂದ ದಾವಣಗೆರೆಯ ಗ್ರೀನ್ಸ್ ವಿರುದ್ಧ ಗೆದ್ದಿತು. ವಿಜಯೇ ತಂಡದ ಪರ ನವೀನ್ ಮತ್ತು ಮೋಸಿನ್ ಕ್ರಮವಾಗಿ 16 ಮತ್ತು 13 ಪಾಯಿಂಟ್ಸ್ ಗಳಿಸಿ ಗೆಲುವಿನ ರೂವಾರಿ ಎನಿಸಿದರು.ಇತರ ಪಂದ್ಯಗಳಲ್ಲಿ ಪಟ್ಟಾಭಿರಾಮ್ ಕ್ಲಬ್‌ನವರು 47-24ರಿಂದ ಬಿಸಿವೈಎ ವಿರುದ್ಧ ಗೆದ್ದರೆ, ಆತಿಥೇಯ   ಶಿವಮೊಗ್ಗ ಯೂತ್ಸ್ 40-24ರಿಂದ ಚಿತ್ರದುರ್ಗದ ದುರ್ಗನ್ಸ್ ವಿರುದ್ಧ ಜಯ ಸಾಧಿಸಿತು.ಎಸ್‌ಬಿಐ ತಂಡದವರು 43-20ರಿಂದ ಹಾಸನದ ಒಮೆಗಾ ವಿರುದ್ಧ ಗೆದ್ದರು. ಎಸ್‌ಬಿಐ ಪರ ಶ್ರೀಧರ್ 19 ಪಾಯಿಂಟ್ಸ್ ಗಳಿಸಿ ತಮ್ಮ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry