ರೋಹನ್, ಖುರೇಷಿಗೆ ಗೆಲುವು: ಪೇಸ್, ಭೂಪತಿ ಶುಭಾರಂಭ

7

ರೋಹನ್, ಖುರೇಷಿಗೆ ಗೆಲುವು: ಪೇಸ್, ಭೂಪತಿ ಶುಭಾರಂಭ

Published:
Updated:

ಮೆಲ್ಬರ್ನ್ (ಪಿಟಿಐ): ಮೂರನೇ ಶ್ರೇಯಾಂಕಿತ ಆಟಗಾರರಾದ ಭಾರತದ ಲಿಯಾಂಡರ್ ಪೇಸ್ ಹಾಗೂ ಮಹೇಶ ಭೂಪತಿ ಜೋಡಿ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದರು.

ವರ್ಷದ ಮೊದಲ ಗ್ರ್ಯಾಂಡ್‌ಸ್ಲಾಮ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಪೇಸ್ ಹಾಗೂ ಭೂಪತಿ ಜೋಡಿ ಗುರುವಾರ 5-7, 6-3, 6-0ರಲ್ಲಿ ಕ್ರೊಯೇಷಿಯಾದ ಇವೊ ಕಾರ್ಲೊವಿಕ್ ಹಾಗೂ ಸರ್ಬಿಯಾದ ಡುಸನ್ ವೆಮಿಕ್ ಜೋಡಿಯನ್ನು ಮಣಿಸಿತು. ಈ ಪಂದ್ಯವು 90 ನಿಮಿಷಗಳವರೆಗೆ ನಡೆಯಿತು.

ರೋಚಕ ಹಣಾಹಣಿ ಕಂಡು ಬಂದ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಭಾರತದ ಪೇಸ್-ಭೂಪತಿ ಜೋಡಿ ಮುಂದಿನ ಎರಡು ಸೆಟ್‌ಗಳಲ್ಲಿ ಲಯ ಕಂಡುಕೊಂಡು ಜಯ ಸಾಧಿಸಿತು.

ಎರಡನೇ ಸುತ್ತಿಗೆ ಬೋಪಣ್ಣ, ಖುರೇಷಿ: ಕಳೆದ ವರ್ಷದ ಯು.ಎಸ್. ಓಪನ್ ಟೆನಿಸ್ ಟೂರ್ನಿಯಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ಪಾತ್ರರಾಗಿದ್ದ ‘ಇಂಡೋ ಪಾಕ್ ಎಕ್ಸ್‌ಪ್ರೆಸ್’ ರೋಹನ್ ಬೋಪಣ್ಣ ಹಾಗೂ ಐಸಾಮ್ ಉಲ್ ಹಕ್ ಖುರೇಷಿ ಡಬಲ್ಸ್ ವಿಭಾಗದ ಮೊದಲನೇ ಸುತ್ತಿನ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.

ಹತ್ತನೇ ಶ್ರೇಯಾಂಕದ ಆಟಗಾರರಾದ ಬೋಪಣ್ಣ-ಖುರೇಷಿ ಜೋಡಿ 6-3, 6-0 ನೇರ ಸೆಟ್‌ಗಳಿಂದ ಬ್ರೆಜಿಲ್‌ನ ಫ್ರಾಂಕೊ ಫೆರೇರೊ ಹಾಗೂ ಆ್ಯಂಡ್ರೆ ಸಾ ಜೋಡಿಯನ್ನು ಮಣಿಸಿತು. ಈ ಪಂದ್ಯವು ಕೇವಲ 49 ನಿಮಿಷದಲ್ಲಿ ಕೊನೆಗೊಂಡಿತು.

ಫ್ರಾನ್ಸ್‌ನ ಜೆರ್ಮಿ ಚಾರ್ಡಿ ಹಾಗೂ ಅರ್ನಾಲ್ಡ್ ಕ್ಲೆಮೆಂಟ್ ಎದುರು ಬೋಪಣ್ಣ ಹಾಗೂ ಖುರೇಷಿ ಎರಡನೇ ಸುತ್ತಿನ ಪಂದ್ಯದಲ್ಲಿ ಸೆಣಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry