ರೋಹಿತಾ, ಆಂಡ್ರಿಯಾಗೆ ಪ್ರಶಸ್ತಿ ಡಬಲ್

7
ಡೆಕ್ಕನ್ ಅಥ್ಲೆಟಿಕ್ ಕ್ಲಬ್ ವತಿಯ ವಾರಾಂತ್ಯ ಸ್ಪರ್ಧಾಕೂಟ

ರೋಹಿತಾ, ಆಂಡ್ರಿಯಾಗೆ ಪ್ರಶಸ್ತಿ ಡಬಲ್

Published:
Updated:

ಬೆಂಗಳೂರು: ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಪಿ.ರೋಹಿತಾ ಚೌದರಿ ಮತ್ತು ಲೆಗೆಸಿ ಸ್ಕೂಲ್‌ನ ಆಂಡ್ರಿಯಾ ಪಿಂಟೊ ಅವರು `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್' ಪತ್ರಿಕಾ ಗುಂಪು ಪ್ರಾಯೋಜಿತ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ  24ನೇ ವಾರ್ಷಿಕ ವಾರಾಂತ್ಯ ಅಥ್ಲೆಟಿಕ್ ಕೂಟದ ಮೂರನೇ ವಾರದ ಸ್ಪರ್ಧಾಕೂಟದ ಹನ್ನೆರಡು ವರ್ಷ ವಯಸ್ಸಿನೊಳಗಿನ ಬಾಲಕಿಯರ ವಿಭಾಗದಲ್ಲಿ  ತಲಾ ಎರಡು ಚಿನ್ನದ ಪದಕ ಗೆದ್ದು ಗಮನಾರ್ಹ ಸಾಮರ್ಥ್ಯ ತೋರಿದ್ದಾರೆ.ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ಸ್ಪರ್ಧಾಕೂಟದಲ್ಲಿ ರೋಹಿತಾ ಟ್ರಿಪಲ್ ಜಂಪ್ ಮತ್ತು ಹೈಜಂಪ್‌ಗಳೆರಡರಲ್ಲಿಯೂ ಅಗ್ರಸ್ಥಾನ ಗಳಿಸಿದರು. ಲೆಗೆಸಿ ಸ್ಕೂಲ್‌ನ ಆಂಡ್ರಿಯಾ ಪಿಂಟೊ ನೂರು ಮೀಟರ್ಸ್ ಓಟ ಮತ್ತು ಲಾಂಗ್‌ಜಂಪ್ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದರು. 15 ವರ್ಷ ವಯಸ್ಸಿನೊಳಗಿನ ಬಾಲಕಿಯರ ವಿಭಾಗದಲ್ಲಿ ಸೇಂಟ್ ಯಶ್ ಪಬ್ಲಿಕ್ ಸ್ಕೂಲ್‌ನ ಎ.ಪದ್ಮಾವತಿ 800ಮೀಟರ್ಸ್ ಓಟ ಮತ್ತು 1500ಮೀಟರ್ಸ್ ಓಟದ ಸ್ಪರ್ಧೆಗಳೆರಡರಲ್ಲಿಯೂ ಮೊದಲಿಗರಾಗಿ ಗುರಿ ಮುಟ್ಟಿ ಚಿನ್ನದ ಡಬಲ್ ಪಡೆದ ಹೆಗ್ಗಳಿಕೆಗೆ ಪಾತ್ರರಾದರು.ಬಾಲಕಿಯರ ವಿಭಾಗದ ಫಲಿತಾಂಶ ಇಂತಿದೆ.12 ವರ್ಷದೊಳಗಿನವರು:

100ಮೀ. ಓಟ: ಆಂಡ್ರಿಯ ಪಿಂಟೊ (ಲೆಗೆಸಿ ಸ್ಕೂಲ್) (ಕಾಲ: 14.3ಸೆ.)-1, ಮಿಹಿಕಾ ಗೊನ್ಸಾಲ್ವೆಸ್ (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಬಾಲಕಿಯರ ಹೈಸ್ಕೂಲು)-2, ಅಂಶುಲಾ ಪ್ರಸಾದ್-3 (ಬೆಥನಿ ಹೈಸ್ಕೂಲು), 800ಮೀ. ಓಟ: ಅಶ್ವಿನಿ (ಸೇಂಟ್ ಯಶ್ ಪಬ್ಲಿಕ್ ಸ್ಕೂಲು) (ಕಾಲ: 2ನಿ.54.9ಸೆ.)-1, ತೇಜಸ್ವಿನಿ (ಔಟ್ರಿಚ್ ಇಂಟರ್‌ನ್ಯಾಶನಲ್ ಸ್ಕೂಲು)-2, ಸಂಜನಾ ಎ ಹೊಸಕೋಟೆ-3 (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲು), 1,500ಮೀ. ಓಟ: ತೇಜಸ್ವಿನಿ (ಔಟ್ರಿಚ್ ಇಂಟರ್‌ನ್ಯಾಶನಲ್ ಸ್ಕೂಲು) (ಕಾಲ: 6ನಿ.03.2ಸೆ.)-1, ಸುಮೇದಾ ಪೂಜಾ-2, ಸ್ನಿಧಿ ಅರಕೆರೆ-3 (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲು), 60ಮೀ. ಹರ್ಡಲ್ಸ್: ಕೃತಿಕಾ (ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ) (ಕಾಲ: 13.9ಸೆ.)-1, ನಟಾಶಾ ಝವೇರಿ (ವಿದ್ಯಾನಿಕೇತನಾ ಸ್ಕೂಲು)-2, ಆಡ್ಲಿನ್ ಬ್ರಿಗೆಟಾ-3 (ಹೋಲಿ ಏಂಜೆಲ್ಸ ಹಿರಿಯ ಪ್ರಾಥಮಿಕ ಶಾಲೆ), ಲಾಂಗ್‌ಜಂಪ್: ಆಂಡ್ರಿಯಾ ಪಿಂಟೊ (ಲೆಗೆಸಿ ಸ್ಕೂಲು) (ದೂರ: 4.36ಮೀ.)-1, ಕೆ.ಎಸ್.ಸಿಮ್ರಾನ್ (ಬೆಥನಿ ಹೈಸ್ಕೂಲು)-2, ಮಿಹಿಕಾ ಗೊನ್ಸಾಲ್ವೆಸ್ (ಸೇಂಟ್ ಫ್ರಾನ್ಸಿಸ್ ಬಾಲಕಿಯರ ಹೈಸ್ಕೂಲು)-3, ಟ್ರಿಪಲ್ ಜಂಪ್: ಪಿ.ರೋಹಿತಾ ಚೌದರಿ (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲು) (ದೂರ: 8.68ಮೀ.)-1, ವಿ.ನಿಹಾರಿಕಾ -2, ಅಂಶುಲಾ ಪ್ರಸಾದ್-3 (ಇಬ್ಬರೂ ಬೆಥನಿ ಹೈಸ್ಕೂಲು), ಹೈಜಂಪ್: ಪಿ.ರೋಹಿತಾ ಚೌಧರಿ (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲು) (ಎತ್ತರ: 1.15ಮೀ.)-1, ಎಸ್.ಭಾವನಾ (ಡೆಕ್ಕನ್ ಇಂಟರ್ ನ್ಯಾಶನಲ್ ಸ್ಕೂಲು)-2, ಆ್ಯಡ್ಲಿನ್ ಬ್ರಿಗೆಟ್ಟ (ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ)-3, ಶಾಟ್‌ಪಟ್: ಮೇಘಾರಾಮ ಪ್ರಿಯನ್ (ವಿದ್ಯಾನಿಕೇತನಾ ಸ್ಕೂಲು) (ದೂರ: 5.78ಮೀ.)-1, ಡಿ.ರಷ್ಮಿ (ಮಿತ್ರಾಲಯ ಬಾಲಕಿಯರ ಹೈಸ್ಕೂಲು)-2, ಫೈಜಾ ಫಹ್ಮಾನ್ (ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ)-3.15 ವರ್ಷದೊಳಗಿನವರು:

100ಮೀ. ಓಟ: ಟೂಮಿ ವೈಷ್ಣವಿ (ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲು) (ಕಾಲ: 13.4ಸೆ.)-1, ಇಳಾ ಮಾನ್ಯ ನವೀನ್-2, ಎಂ.ಬಿ.ಮುತ್ತಮ್ಮ -3 (ಇಬ್ಬರೂ ಸೇಕ್ರೆಡ್ ಹಾರ್ಟ್ ಬಾಲಕಿಯರ ಹೈಸ್ಕೂಲು), 800ಮೀ. ಓಟ: ಎ.ಪದ್ಮಾವತಿ (ಸೇಂಟ್ ಯಶ್ ಪಬ್ಲಿಕ್ ಸ್ಕೂಲು) (ಕಾಲ: 2ನಿ.48.1ಸೆ.)-1, ಜೆಶ್ರಿತಾ ಕುಮಾರ್ (ಕೇಂದ್ರೀಯ ವಿದ್ಯಾಲಯ)-2, ತಾನೀಷಾ ಪಾಂಚಾಲ್-3 (ವಿದ್ಯಾನಿಕೇತನಾ ಸ್ಕೂಲು), 1500ಮೀ. ಓಟ: ಎ.ಪದ್ಮಾವತಿ (ಸೇಂಟ್ ಯಶ್ ಪಬ್ಲಿಕ್ ಸ್ಕೂಲು) (ಕಾಲ: 5ನಿ.48.4ಸೆ.)-1, ತಾನಿಷಾ ಪಾಂಚಾಲ್ (ವಿದ್ಯಾನಿಕೇತನಾ ಸ್ಕೂಲು)-2, ಎಸ್.ನಿಖಿತಾ-3 (ಆರ್.ಟಿ.ನಗರ ಪಬ್ಲಿಕ್ ಸ್ಕೂಲು), 100ಮೀ. ಹರ್ಡಲ್ಸ್: ವಿಹಾ ಅತ್ರಿ (ಕ್ಲಾರೆನ್ಸ್ ಹೈಸ್ಕೂಲು) (ಕಾಲ: 18.2ಸೆ.)-1, ಟೂಮಿ ವೈಷ್ಣವಿ -2, ರೇಷ್ಮಾ ರಾಯ್ -3 (ಇಬ್ಬರೂ ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲು), ಲಾಂಗ್‌ಜಂಪ್: ಕಾವ್ಯಾ ಆ್ಯನಿ ಜೇಕಬ್ (ಕ್ಲಾರೆನ್ಸ್ ಹೈಸ್ಕೂಲು) (ದೂರ: 4.65ಮೀ.)-1, ತಾನೀಷಾ ನಾಯ್ಕ (ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲು)-2, ತಾನಿಷಾ (ಬೆಥನಿ ಹೈಸ್ಕೂಲು)-3, ಟ್ರಿಪಲ್‌ಜಂಪ್: ಕಾವ್ಯಾ ಆ್ಯನಿ ಜೇಕಬ್ (ಕ್ಲಾರೆನ್ಸ್ ಹೈಸ್ಕೂಲು) (ದೂರ: 10.12ಮೀ.)-1, ವಿಹಾ ಅತ್ರಿ (ಕ್ಲಾರೆನ್ಸ್ ಹೈಸ್ಕೂಲು)-2, ಜ್ಯೋತಿಕಾ ರೋಶನ್ (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಬಾಲಕಿಯರ ಹೈಸ್ಕೂಲು)-3,ಹೈಜಂಪ್: ಜಿ.ಅನ್ನಪೂರ್ಣ (ಸಿಎಂಆರ್ ನ್ಯಾಶನಲ್ ಪಬ್ಲಿಕ್ ಸ್ಕೂಲು) (ಎತ್ತರ: 1.43ಮೀ.)-1, ಸಿ.ಧೃತಿ (ಹೋಲಿ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆ)-2, ಪಿ.ಪಿ. ಹರ್ಷಿಣಿ (ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲು-3, ಶಾಟ್‌ಪಟ್: ಸ್ಮಾಯನಾ ಕಮಾತ್ (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲು) (ಕಾಲ: 8.66ಮೀ.)-1, ಅಲಿಯಾ ತನ್ವೀರ್ (ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲು)-2, ಆರ್.ಸಹನಾ (ನಿರ್ಮಲ ರಾಣಿ ಆಂಗ್ಲ ಪ್ರಾಥಮಿಕ ಶಾಲೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry