ಬುಧವಾರ, ಮಾರ್ಚ್ 3, 2021
23 °C
ಮಧ್ಯರಾತ್ರಿಯಲ್ಲಿ ಧರಣಿ ನಿರತರನ್ನು ಭೇಟಿ ಮಾಡಿದ ಕಾಂಗ್ರೆಸ್ ಉಪಾಧ್ಯಕ್ಷ

ರೋಹಿತ್ ಪ್ರಕರಣ: ವಿದ್ಯಾರ್ಥಿಗಳೊಟ್ಟಿಗೆ ಧರಣಿ ಕುಳಿತ ರಾಹುಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಹಿತ್ ಪ್ರಕರಣ: ವಿದ್ಯಾರ್ಥಿಗಳೊಟ್ಟಿಗೆ ಧರಣಿ ಕುಳಿತ ರಾಹುಲ್

ಹೈದರಾಬಾದ್ (ಪಿಟಿಐ): ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಶನಿವಾರವೂ ಮುಂದುವರೆದಿದ್ದು, ಧರಣಿ ನಿರತರೊಟ್ಟಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಂಡಿದ್ದಾರೆ. ದಿನದ ಮಟ್ಟಿಗೆ ರಾಹುಲ್ ಪ್ರತಿಭಟನೆ ನಡೆಸಲಿದ್ದಾರೆ.ಶನಿವಾರ ದಿನದ ಮಟ್ಟಿಗೆ ರಾಹುಲ್ ಅವರು ವಿದ್ಯಾರ್ಥಿಗಳೊಟ್ಟಿಗೆ ಪ್ರತಿಭಟನೆ ನಡೆಸಲಿದ್ದಾರೆ. ಇದಕ್ಕಾಗಿ ಶುಕ್ರವಾರ ರಾತ್ರಿಯೇ ಹೈದರಾಬಾದ್‌ಗೆ ಬಂದಿದ್ದ ರಾಹುಲ್, ಮಧ್ಯರಾತ್ರಿ 12.10 ಗಂಟೆಗೆ ಪ್ರತಿಭಟನಾ ನಿರತರನ್ನು ಭೇಟಿ ಮಾಡಿ ಎರಡು ತಾಸು ಕಾಲ ಕಳೆದರು. ಜನವರಿ 30 ರೋಹಿತ್ ಅವರ ಜನ್ಮದಿನ. ಅದರ ನಿಮಿತ್ತ ಧರಣಿ ನಿರತ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳೊಟ್ಟಿಗೆ ರಾಹುಲ್ ಅವರೂ ಮೊಂಬತ್ತಿ ಬೆಳಗಿ ಪ್ರತಿಭಟಿಸಿದರು.ಮಧ್ಯರಾತ್ರಿ ಸ್ಥಳದಿಂದ ನಿರ್ಗಮಿಸಿದ್ದ ರಾಹುಲ್ ಇದೀಗ ಬೆಳಿಗ್ಗೆ ಮತ್ತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸಂಜೆಯ ವರೆಗೂ ಅವರು ಧರಣಿ ನಿರತ ವಿದ್ಯಾರ್ಥಿಗಳೊಟ್ಟಿಗೆ ಇರಲಿದ್ದಾರೆ. ಪ್ರತಿಭಟನಾ ನಿರತರನ್ನು ರಾಹುಲ್ ಭೇಟಿ ಮಾಡಿರುವುದು ಇದು ಎರಡನೇ ಬಾರಿ.

ರೋಹಿತ್ ಅವರ ತಾಯಿ ರಾಧಿಕಾ ಹಾಗೂ ಅವರ ಸಹೋದರ ರಾಜು ಕೂಡ ಪ್ರತಿಭಟನಾ ಸ್ಥಳದಲ್ಲಿದ್ದಾರೆ.‘ರಾಹುಲ್ ಅವರು ಧರಣಿ ನಡೆಸುತ್ತಿದ್ದಾರೆ’ ಎಂದು ಎನ್‌ಎಸ್‌ಯುಐ ಅಧ್ಯಕ್ಷ ರೊಜಿ ಎಂ ಜಾನ್ ತಿಳಿಸಿದ್ದಾರೆ.ಮುರ್ದಾಬಾದ್‌ ಅನ್ಬೇಡಿ- ರಾಹುಲ್ ಕಿವಿಮಾತು‌: ಈ ಮಧ್ಯೆ, ರಾಹುಲ್ ಗಾಂಧಿ ಅವರು ಮಧ್ಯರಾತ್ರಿ ಪ್ರತಿಭಟನಾ ಸ್ಥಳಕ್ಕೆ ಬಂದಾಗ ಸತ್ಯಾಗ್ರಹ ನಡೆಸುತ್ತಿರುವ ವಿದ್ಯಾರ್ಥಿಗಳು ಸ್ಮೃತಿ ಇರಾನಿ ಹಾಗೂ ದತ್ತಾತ್ತ್ರೇಯ ಅವರ ವಿರುದ್ಧ ‘ಮುರ್ದಾಬಾದ್‌’ ಎಂದು ಘೋಷಣೆಗಳನ್ನು ಕೂಗಿದರು.ಈ ವೇಳೆ ಮಧ್ಯಪ್ರವೇಶಿಸಿದ ರಾಹುಲ್, ‘ಮುರ್ದಾಬಾದ್‌’ ಘೋಷಣೆ ಕೂಗದಂತೆ ಮನವಿ ಮಾಡಿದರು. ‘ಮುರ್ದಾಬಾದ್‌ ಎನ್ನಬೇಡಿ. ಅದರಿಂದ ನ್ಯಾಯ ಸಿಗಲ್ಲ’ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.