ರೌಡಿಗಳ ಹಾವಳಿ ತಪ್ಪಿಸಿ

7

ರೌಡಿಗಳ ಹಾವಳಿ ತಪ್ಪಿಸಿ

Published:
Updated:

ಮೈಸೂರು ರಸ್ತೆಯ ವಾಲ್ಮೀಕಿ ನಗರದ 2ನೇ ಮುಖ್ಯ ರಸ್ತೆಯ 2ನೇ ಅಡ್ಡ ರಸ್ತೆಯಲ್ಲಿ ಕೆಲವು ರೌಡಿಗಳು ಸೇರಿಕೊಂಡು, ಗಾಂಜಾ, ಸಾಲ್ಸಾಷನ್ ಪೆಯಿಂಟ್‌ನಂಥ ನಶೆ ಬರುವ ವಸ್ತುಗಳನ್ನು ಮೂಗಿಗೆ ಏರಿಸಿಕೊಂಡು ನಶೆ ಬಂದ ಮೇಲೆ ರಸ್ತೆಗಿಳಿದು ಚುಡಾಯಿಸುತ್ತಾರೆ.

ಬೇಕೆಂದೆ ಮೇಲೆ ಬೀಳುತ್ತಾರೆ. ಇಲ್ಲವೇ ಡಿಕ್ಕಿ ಹೊಡೆಯುತ್ತಾರೆ.ರಾತ್ರಿ ಒಂಟಿ ಮಹಿಳೆಯರ ಮನೆ ಗುರುತಿಸಿ ಬಾಗಿಲು ಬಡಿಯುತ್ತಾರೆ. ಈಗಾಗಲೇ ಇಬ್ಬರು ಮೂವರು ನಾಗರೀಕರನ್ನು ತಡೆದು ತೊಂದರೆ ಕೊಟ್ಟಿರುತ್ತಾರೆ. ಇಂಥವರ ಹಾವಳಿಯನ್ನು ತಪ್ಪಿಸಬೇಕು ಎಂದು ಪೊಲೀಸರಲ್ಲಿ ಮನವಿ.

-

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry