ಗುರುವಾರ , ಜನವರಿ 23, 2020
28 °C

ರೌಡಿ ತರಕಾರಿ ಖಲೀಲ್‌ ಬಂಧನ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಿಲಕ್‌ನಗರದ 31ನೇ ಅಡ್ಡರಸ್ತೆಯಲ್ಲಿ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಕುಖ್ಯಾತ ರೌಡಿ ಖಲೀಲ್‌ ಪಾಷಾ ಅಲಿಯಾಸ್‌ ತರಕಾರಿ ಖಲೀಲ್‌ (46) ಹಾಗೂ ಆತನ ಸಹಚರ­ರನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.ವೀವರ್ಸ್‌ ಕಾಲೊನಿಯ ರಾಯಪ್ಪ (32), ಕೆಂಗೇರಿಯ ಸಮೀವುಲ್ಲಾ (22), ಮಂಜುನಾಥ ಅಲಿಯಾಸ್ ಪಾಗಲ್ (24) ಹಾಗೂ ಶಂಕರ (23) ಇತರೆ ಆರೋಪಿಗಳು. ಬಂಧಿತರಿಂದ ನಕಲಿ ಪಿಸ್ತೂಲ್‌, ಐದು ನಕಲಿ ಗುಂಡು­ಗಳು, ಕೃತ್ಯಕ್ಕೆ ತಂದಿದ್ದ ಕಾರು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿ­ಕೊಳ್ಳ­ಲಾಗಿ­ದೆ ಎಂದು ಪೊಲೀಸರು ತಿಳಿಸಿದರು.32 ಪ್ರಕರಣಗಳ ಆರೋಪಿ:  ಖಲೀಲ್‌ ವಿರುದ್ಧ ನಗರದ ಭಾರತಿನಗರ, ಬಸವನ­ಗುಡಿ, ಕುಮಾರಸ್ವಾಮಿ ಲೇಔಟ್‌ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಒಟ್ಟು 32 ಪ್ರಕರಣಗಳು ದಾಖಲಾಗಿವೆ.

ಪ್ರತಿಕ್ರಿಯಿಸಿ (+)