ರ‌್ಯಾಲಿ: ಬೆಂಗಳೂರಿನ ದಂಪತಿಗೆ ಪ್ರಶಸ್ತಿ

ಬುಧವಾರ, ಜೂಲೈ 17, 2019
30 °C

ರ‌್ಯಾಲಿ: ಬೆಂಗಳೂರಿನ ದಂಪತಿಗೆ ಪ್ರಶಸ್ತಿ

Published:
Updated:

ಬೆಂಗಳೂರು: ಬೆಂಗಳೂರಿನ ದಂಪತಿಯೊಬ್ಬರು ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ರ‌್ಯಾಲಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಸತೀಶ್ ಗೋಪಾಲಕೃಷ್ಣನ್ ಹಾಗೂ ಅವರ ಪತ್ನಿ ಸಂಪರ್ಕ ಸಲಹೆಗಾರ್ತಿ ಸವೇರಾ ಡಿಸೋಜಾ ಅವರು ಸಾಮರ್ಥ್ಯ ಪರೀಕ್ಷೆಯ (ಎಂಡ್ಯೂರೆನ್ಸ್) ರೇಸ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.  `ನಾನು ಕೇವಲ ಹವ್ಯಾಸಕ್ಕಾಗಿ ರೇಸ್ ಶುರು ಮಾಡ್ದ್ದಿದೆ. ಆದರೆ ಇಲ್ಲಿ ಗೆದ್ದಿರುವುದು ನಮ್ಮನ್ನೇ ಅಚ್ಚರಿಯಲ್ಲಿ ಮುಳುಗಿಸಿದೆ~ ಎಂದು ಸತೀಶ್ ನುಡಿದರು. ಅವರು ಗಿರೀಜಾ ಶಂಕರ್ ಜೋಶಿ ಹಾಗೂ ಚಂದ್ರಮೌಳಿ ಅವರನ್ನು ಹಿಂದಿಕ್ಕಿ ಅಚ್ಚರಿ ಪ್ರದರ್ಶನ ನೀಡಿದರು.ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದವರನ್ನು ನಗರದ ಹೋಟೆಲ್‌ನಲ್ಲಿ ಶುಕ್ರವಾರ ಸನ್ಮಾನಿಸಲಾಯಿತು. ಕಾರು ರೇಸ್ ವಿಭಾಗದಲ್ಲಿ ನಾಸಿಕ್‌ನ ಮನೋಜ್ ವೈದ್ಯ ಹಾಗೂ ಬೆಂಗಳೂರಿನ ಉದಯಕುಮಾರ್ ಮೊದಲ ಸ್ಥಾನ ಪಡೆದರು. ಬೈಕ್ ವಿಭಾಗದಲ್ಲಿ ಪ್ರಮೋದ್ ಜೋಶುವಾ ಮೊದಲ ಸ್ಥಾನ ಗಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry