ಸೋಮವಾರ, ಜೂನ್ 14, 2021
26 °C

ರ‍್ಯಾಗಿಂಗ್ ಆರೋಪ: 8 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟಣ್‌ (ಗುಜರಾತ್‌) (ಪಿಟಿಐ): ಇಲ್ಲಿನ ವೈದ್ಯಕೀಯ ಕಾಲೇಜು ಹಾಸ್ಟೆಲ್‌ನಲ್ಲಿ 18 ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ನಡೆಸಿದ ಆರೋಪದ ಮೇಲೆ 8 ಎಂಬಿಬಿಎಸ್‌ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.ಎಂಟು ವಿದ್ಯಾರ್ಥಿಗಳನ್ನು ಕಾಲೇಜಿ ನಿಂದ ಅಮಾನತು ಗೊಳಿಸಲಾಗಿದ್ದು, ಹಾಸ್ಟೆಲ್ ಕೊಠಡಿ ತೆರವುಗೊಳಿಸುವಂತೆ ಸೂಚಿಸಿಲಾಗಿದೆ.ಪಟಣ್‌ನ ಧರ್ಮಪುರದಲ್ಲಿರುವ ಗುಜರಾತ್‌ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸೊಸೈಟಿಗೆ ಸೇರಿದ್ದ ವೈದ್ಯ ಕೀಯ ಕಾಲೇಜಿನ ಎರಡನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಬಟ್ಟೆ ಕಳಚಲು ಒತ್ತಾ ಯಿಸಿ ವ್ಯಾಯಾಮ ಮಾಡುವಂತೆ ಒತ್ತಾ ಯಿಸಿದ್ದರು ಎಂದು ದೂರು

ದಾಖ ಲಾಗಿತ್ತು. ಈ ಘಟನೆ ಮಾ.4 ರಂದು ಹಾಸ್ಟೆಲ್‌ ಆವರಣದಲ್ಲಿ ನಡೆದಿತ್ತು.‘ಬಟ್ಟೆ ಕಳಚಿ ವ್ಯಾಯಾಮ ಮಾಡಲು ಒತ್ತಾಯಿಸಿದ ಹಿರಿಯ ವಿದ್ಯಾರ್ಥಿಗಳ ಕಿರುಕುಳ ಸಹಿಸದ ಕಿರಿಯ ವಿದ್ಯಾರ್ಥಿ ಗಳು ಸ್ಥಳದಿಂದ ಓಡಿಹೋಗಲು ಮುಂದಾದರು. ಈ ವೇಳೆ ಅವರನ್ನು ಹಾಸ್ಟೆಲ್‌ನ ಕೊಠಡಿಯಲ್ಲಿ ಕೂಡಿಹಾಕಿ ಅಸಭ್ಯವಾಗಿ ವೀಡಿಯೊ ಮಾಡ ಲಾಯಿತು’ ಎಂದು ಇನ್‌ಸ್ಪೆಕ್ಟರ್‌ ಆರ್‌.ಜಿ.ಪಾರ್ಮರ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.