ರ‍್ಯಾಲಿಯ ವೇಳೆ ಗುಂಡಿನ ದಾಳಿ: ಗಾಯ

7

ರ‍್ಯಾಲಿಯ ವೇಳೆ ಗುಂಡಿನ ದಾಳಿ: ಗಾಯ

Published:
Updated:

ಲಾಸ್ ಏಂಜಲೀಸ್ (ಎಎಫ್‌ಪಿ): ಕೊಲೆರಾಡೊ ರಾಜ್ಯದ ಡೆನಿವರ್‌ನಲ್ಲಿ ಮರಿಜುವಾನ (ಗಾಂಜಾ)  ಧೂಮಪಾನಿಗಳ ರ‍್ಯಾಲಿಯಲ್ಲಿ ಗುಂಡಿನ ದಾಳಿ ನಡೆದು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸಿಟಿಸಿವಿಕ್ ಸೆಂಟರ್ ಪಾರ್ಕ್‌ನಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದ ವೇಳೆ ಈ ಗುಂಡಿನ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಮಹಿಳೆ ಮತ್ತು ಬಾಲಕ  ಸೇರಿದಂತೆ ಮೂವರು  ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ.ವಾಷಿಂಗ್ಟನ್ ಮತ್ತು ಕೊಲೆರಾಡೊ ರಾಜ್ಯಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮರಿಜುವಾನ ಹೊಂದುವ ಪ್ರಸ್ತಾವಕ್ಕೆ ಕಾನೂನು ಸಮ್ಮತಿ ನೀಡಲಾಗಿತ್ತು.  4/20 ಮರಿಜುವಾನ (ಗಾಂಜಾ) ಹೊಂದುವುದಕ್ಕೆ ಏ.20ರಂದು ಅನುಮತಿ ನೀಡಲಾಗಿದ್ದು ಏ.20 ರಂದು ವಿಶೇಷ ದಿನವನ್ನಾಗಿ ಆಚರಿಸುತ್ತಾರೆ. ಆದರೆ ಅಮೆರಿಕದ ಫೆಡರೆಲ್ ಕಾನೂನಿನ ಪ್ರಕಾರ ಮರಿಜುವಾನ ಹೊಂದುವುದು ಕಾನೂನು ಬಾಹಿರ.ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry