ಲಂಕಾಕ್ಕೆ ಇನಿಂಗ್ಸ್ ಹಿನ್ನಡೆಯ ಭಯ

ಶನಿವಾರ, ಜೂಲೈ 20, 2019
28 °C

ಲಂಕಾಕ್ಕೆ ಇನಿಂಗ್ಸ್ ಹಿನ್ನಡೆಯ ಭಯ

Published:
Updated:

ಕೊಲಂಬೊ (ಪಿಟಿಐ): ಆತಿಥೇಯ ಶ್ರೀಲಂಕಾ ತಂಡದವರು ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸುವ ಭಯದಲ್ಲಿದ್ದಾರೆ.ಸಿಂಹಳೀಸ್ ಕ್ರೀಡಾ ಕ್ಲಬ್ ಕ್ರೀಡಾಂಗಣದಲ್ಲಿ ಮಳೆಯ ಅಡ್ಡಿಯ ನಡುವೆಯೇ ನಾಲ್ಕು ದಿನಗಳ ಆಟ ಮುಗಿದಿದ್ದು, ಲಂಕಾ ತಂಡವು ಮೊದಲ ಇನಿಂಗ್ಸ್‌ನಲ್ಲಿ ಇನ್ನೂ 273 ರನ್‌ಗಳಿಂದ ಹಿಂದಿದೆ.ಪಾಕಿಸ್ತಾನ ತಂಡವು ಆರು ವಿಕೆಟ್‌ಗಳನ್ನು ಕಳೆದುಕೊಂಡು 551 ಸೇರಿಸಿ ತನ್ನ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ನಂತರ ದಿಟ್ಟ ಉತ್ತರ ನೀಡುವ ಆಶಯದೊಂದಿಗೆ ಹೋರಾಟ ಆರಂಭಿಸಿದ ಶ್ರೀಲಂಕಾ ನಾಲ್ಕನೇ ದಿನದಾಟದ ಅಂತ್ಯಕ್ಕೆ ಗಳಿಸಿದ್ದು 85.4 ಓವರುಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 278 ರನ್.ತಿಲಕರತ್ನೆ ದಿಲ್ಶಾನ್ (121; 299 ನಿಮಿಷ, 195 ಎಸೆತ, 13 ಬೌಂಡರಿ, 1 ಸಿಕ್ಸರ್) ಹಾಗೂ ಕ್ರೀಸ್‌ನಲ್ಲಿರುವ ಕುಮಾರ ಸಂಗಕ್ಕಾರ (144; 254 ಎ., 14 ಬೌಂಡರಿ) ಅವರು ಶತಕದಾಟವಾಡಿ ಲಂಕಾ ತಂಡಕ್ಕೆ ಆಸರೆಯಾದರು.ಸಂಕ್ಷಿಪ್ತ ಸ್ಕೋರ್:  ಪಾಕಿಸ್ತಾನ: ಪ್ರಥಮ ಇನಿಂಗ್ಸ್ 147 ಓವರುಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 551. ಶ್ರೀಲಂಕಾ: ಮೊದಲ ಇನಿಂಗ್ಸ್ 85.4 ಓವರುಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 278 (ತಿಲಕರತ್ನೆ ದಿಲ್ಶಾನ್ 121, ಕುಮಾರ ಸಂಗಕ್ಕಾರ ಬ್ಯಾಟಿಂಗ್ 144; ಜುನೈದ್ ಖಾನ್ 56ಕ್ಕೆ3).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry