ಲಂಕಾಕ್ಕೆ ಸತತ ಮೂರನೇ ಗೆಲುವು

7

ಲಂಕಾಕ್ಕೆ ಸತತ ಮೂರನೇ ಗೆಲುವು

Published:
Updated:

ಹೋಬರ್ಟ್ (ಪಿಟಿಐ): ಸಾಕಷ್ಟು ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ವಿಕೆಟ್‌ಗಳ ಗೆಲುವು ಪಡೆದ ಶ್ರೀಲಂಕಾ ತಂಡ ತ್ರಿಕೋನ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು.

ಹೋಬರ್ಟ್‌ನ ಬೆಲೆರೀವ್ ಓವಲ್‌ನಲ್ಲಿ ಶುಕ್ರವಾರ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 280 ರನ್ ಪೇರಿಸಿತು. ಪೀಟರ್ ಫಾರೆಸ್ಟ್ (104, 138 ಎಸೆತ, 10 ಬೌಂ, 2 ಸಿಕ್ಸರ್) ತಾಳ್ಮೆಯ ಶತಕದ ಮೂಲಕ ಆಸೀಸ್ ಇನಿಂಗ್ಸ್‌ಗೆ ಬಲ ನೀಡಿದರು.

ಲಂಕಾ ತಂಡ 49.2 ಓವರ್‌ಗಳಲ್ಲಿ 7 ವಿಕೆಟ್‌ಗೆ 283 ರನ್ ಗಳಿಸಿ ಜಯ ಸಾಧಿಸಿತು. ನಾಯಕ ಮಾಹೇಲ ಜಯವರ್ಧನೆ (85, 81 ಎಸೆತ, 6 ಬೌಂ, 1 ಸಿಕ್ಸರ್) ಮತ್ತು ದಿನೇಶ್ ಚಂಡಿಮಾಲ (80, 100 ಎಸೆತ, 7 ಬೌಂ) ಆಸೀಸ್‌ಗೆ ಪ್ರತ್ಯುತ್ತರ ನೀಡುವಲ್ಲಿ ಯಶಸ್ವಿಯಾದರು.

ಶ್ರೀಲಂಕಾ ಗೆಲುವು ಸಾಧಿಸಿದ ಕಾರಣ ಭಾರತ ತಂಡದ ಫೈನಲ್ ಹಾದಿ ಮತ್ತಷ್ಟು ಕಠಿಣ ಎನಿಸಿದೆ. ಇದೀಗ ಮೂರೂ ತಂಡಗಳು ಲೀಗ್‌ನಲ್ಲಿ ತಲಾ ಆರು ಪಂದ್ಯಗಳನ್ನು ಆಡಿವೆ.

ಸತತ ಮೂರನೇ ಗೆಲುವು ಪಡೆದ ಲಂಕಾ 15 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ (14 ಪಾಯಿಂಟ್) ಎರಡನೇ ಸ್ಥಾನ ಹೊಂದಿದೆ. ಮಹೇಂದ್ರ ಸಿಂಗ್ ದೋನಿ ಬಳಗ 10 ಪಾಯಿಂಟ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಭಾರತಕ್ಕೆ ಫೈನಲ್ ಪ್ರವೇಶಿಸಲು ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ.

ಆಸೀಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ಎದುರಾದ ಒತ್ತಡವನ್ನು ಮೆಟ್ಟಿನಿಂತ ಕಾರಣ ಲಂಕಾ ತಂಡಕ್ಕೆ ಗೆಲುವು ದೊರೆಯಿತು. ಜಯವರ್ಧನೆ ಆರಂಭದಲ್ಲಿ ತಂಡದ ನೆರವಿಗೆ ನಿಂತರು. ಅವರು ಔಟಾದ ಬಳಿಕ ಚಂಡಿಮಾಲ ಎದುರಾಳಿ ಬೌಲರ್‌ಗಳ ಮೇಲೆ ಪ್ರಭುತ್ವ ಸಾಧಿಸಿದರು.

45ನೇ ಓವರ್‌ನಲ್ಲಿ ಐದನೇ ವಿಕೆಟ್ ರೂಪದಲ್ಲಿ ಚಂಡಿಮಾಲ ಔಟ್ ಆದಾಗ ತಂಡದ ಗೆಲುವಿಗೆ ಇನ್ನೂ 38 ರನ್‌ಗಳು ಬೇಕಿದ್ದವು. ಆ ಬಳಿಕ ಫರ್ವೀಜ್ ಮಹರೂಫ್ (5) ಮತ್ತು ಏಂಜೆಲೊ ಮ್ಯಾಥ್ಯೂಸ್ (24) ವಿಕೆಟ್ ಪಡೆದ ಆಸೀಸ್ ಗೆಲುವಿನ ಭರವಸೆ ಮೂಡಿಸಿತ್ತು.

ಆದರೆ ತಿಸಾರ ಪೆರೇರಾ (ಅಜೇಯ 21, 11 ಎಸೆತ, 2 ಬೌಂ, 1 ಸಿಕ್ಸರ್) ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಲಂಕಾ ತಂಡದ ರೋಚಕ ಜಯಕ್ಕೆ ಕಾರಣರಾದರು.

ಫಾರೆಸ್ಟ್ ಶತಕ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ತಂಡದ ಆರಂಭ ಆಘಾತಕಾರಿಯಾಗಿತ್ತು. ತಂಡದ ಮೊತ್ತ 27 ಆಗುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರು ಪೆವಿಲಿಯನ್‌ಗೆ ಮರಳಿದ್ದರು.

ಈ ಹಂತದಲ್ಲಿ ಫಾರೆಸ್ಟ್ ಹಾಗೂ ನಾಯಕ ಮೈಕಲ್ ಕ್ಲಾರ್ಕ್ ತಂಡದ ನೆರವಿಗೆ ನಿಂತರು. ಇವರು ಮೂರನೇ ವಿಕೆಟ್‌ಗೆ 154 ರನ್ ಸೇರಿಸಿದ ಕಾರಣ ಆಸೀಸ್‌ಗೆ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು. ಕ್ಲಾರ್ಕ್ (72, 79 ಎಸೆತ, 5 ಬೌಂ, 2 ಸಿಕ್ಸರ್) ಆಕರ್ಷಕ ಅರ್ಧಶತಕ ಗಳಿಸಿದರು.

ತಿಸಾರ ಪೆರೇರಾ ಎಸೆದ 40ನೇ ಓವರ್‌ನಲ್ಲಿ ಫಾರೆಸ್ಟ್ ಚೊಚ್ಚಲ ಶತಕ ಪೂರೈಸಿದರು. ಆ ಬಳಿಕ ಅವರು ಹೆಚ್ಚುಹೊತ್ತು ನಿಲ್ಲಲಿಲ್ಲ. ಡೇವಿಡ್ ಹಸ್ಸಿ (40, 28 ಎಸೆತ, 2 ಬೌಂ, 1 ಸಿಕ್ಸರ್) ಕೊನೆಯಲ್ಲಿ ತಂಡದ ಮೊತ್ತವನ್ನು ಮತ್ತಷ್ಟು ಹಿಗ್ಗಿಸುವ ಕೆಲಸ ಮಾಡಿದರು.

ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 280

ಮ್ಯಾಥ್ಯೂ ವೇಡ್ ಸಿ ಜಯವರ್ಧನೆ ಬಿ ನುವಾನ್ ಕುಲಶೇಖರ  05

ಡೇವಿಡ್ ವಾರ್ನರ್ ಸಿ ಸಂಗಕ್ಕಾರ ಬಿ ಫರ್ವೀಜ್ ಮಹರೂಫ್  07

ಪೀಟರ್ ಫಾರೆಸ್ಟ್ ಸಿ ಮಹರೂಫ್ ಬಿ ಏಂಜೆಲೊ ಮ್ಯಾಥ್ಯೂಸ್  104

ಮೈಕಲ್ ಕ್ಲಾರ್ಕ್ ಸಿ ಪೆರೇರಾ ಬಿ ಏಂಜೆಲೊ ಮ್ಯಾಥ್ಯೂಸ್  72

ಮೈಕ್ ಹಸ್ಸಿ ಬಿ ಲಸಿತ್ ಮಾಲಿಂಗ  21

ಡೇವಿಡ್ ಹಸ್ಸಿ ಔಟಾಗದೆ  40

ಡೇನಿಯಲ್ ಕ್ರಿಸ್ಟಿಯನ್ ಸ್ಟಂಪ್ ಸಂಗಕ್ಕಾರ ಬಿ ರಂಗನಾ ಹೆರಾತ್  06

ಬ್ರೆಟ್ ಲೀ ಔಟಾಗದೆ  20

ಇತರೆ: (ಬೈ-1, ಲೆಗ್‌ಬೈ-1, ವೈಡ್-3)  05

ವಿಕೆಟ್ ಪತನ: 1-5 (ವೇಡ್; 1.5), 2-27 (ವಾರ್ನರ್; 6.4), 3-181 (ಕ್ಲಾರ್ಕ್; 38.1), 4-201 (ಫಾರೆಸ್ಟ್; 40.2), 5-243 (ಮೈಕ್ ಹಸ್ಸಿ; 44.5), 6-250 (ಕ್ರಿಸ್ಟಿಯನ್; 45.6)

ಬೌಲಿಂಗ್: ಲಸಿತ್ ಮಾಲಿಂಗ 10-0-56-1, ನುವಾನ್ ಕುಲಶೇಖರ 10-0-59-1, ಫರ್ವೀಜ್ ಮಹರೂಫ್ 10-0-40-1, ರಂಗನಾ ಹೆರಾತ್ 9-0-45-1, ಏಂಜೆಲೊ ಮ್ಯಾಥ್ಯೂಸ್ 7-0-43-2, ತಿಸಾರ ಪೆರೇರಾ 4-0-35-0

ಶ್ರೀಲಂಕಾ: 49.2 ಓವರ್‌ಗಳಲ್ಲಿ 7 ವಿಕೆಟ್‌ಗೆ 283

ಮಾಹೇಲ ಜಯವರ್ಧನೆ ಸ್ಟಂಪ್ ವೇಡ್ ಬಿ ಕ್ಸೇವಿಯರ್ ಡೊಹರ್ಟಿ  85

ತಿಲಕರತ್ನೆ ದಿಲ್ಶಾನ್ ಸಿ ಫಾರೆಸ್ಟ್ ಬಿ ಬೆನ್ ಹಿಲ್ಫೆನಾಸ್  03

ಕುಮಾರ ಸಂಗಕ್ಕಾರ ಸಿ ವಾರ್ನರ್ ಬಿ ಡೇನಿಯಲ್ ಕ್ರಿಸ್ಟಿಯನ್  22

ದಿನೇಶ್ ಚಂಡಿಮಾಲ ಎಲ್‌ಬಿಡಬ್ಲ್ಯು ಬಿ ರ‌್ಯಾನ್ ಹ್ಯಾರಿಸ್  80

ಲಾಹಿರು ತಿರಿಮನ್ನೆ ಸಿ ಹಿಲ್ಫೆನಾಸ್ ಬಿ ಡೇನಿಯಲ್ ಕ್ರಿಸ್ಟಿಯನ್  24

ಏಂಜೆಲೊ ಮ್ಯಾಥ್ಯೂಸ್ ಸಿ ವಾರ್ನರ್ ಬಿ ಡೇನಿಯಲ್ ಕ್ರಿಸ್ಟಿಯನ್  24

ಫರ್ವೀಜ್ ಮಹರೂಫ್ ಸಿ ಹ್ಯಾರಿಸ್ ಬಿ ಬೆನ್ ಹಿಲ್ಫೆನಾಸ್  05

ತಿಸಾರ ಪೆರೇರಾ ಔಟಾಗದೆ  21

ನುವಾನ್ ಕುಲಶೇಖರ ಔಟಾಗದೆ  04

ಇತರೆ (ಬೈ-1, ಲೆಗ್‌ಬೈ-6, ವೈಡ್-8)  15

ವಿಕೆಟ್ ಪತನ: 1-55 (ದಿಲ್ಶಾನ್; 7.6), 2-90 (ಸಂಗಕ್ಕಾರ; 13.5), 3-153 (ಜಯವರ್ಧನೆ; 26.2), 4-202 (ತಿರಿಮನ್ನೆ; 36.5), 5-243 (ಚಂಡಿಮಾಲ; 44.2), 6-250 (ಮಹರೂಫ್; 45.5), 7-267 (ಮ್ಯಾಥ್ಯೂಸ್; 48.3)

ಬೌಲಿಂಗ್: ಬ್ರೆಟ್ ಲೀ 9.2-0-63-0, ಬೆನ್ ಹಿಲ್ಫೆನಾಸ್ 10-0-51-2, ರ‌್ಯಾನ್ ಹ್ಯಾರಿಸ್ 6-0-43-1, ಡೇನಿಯಲ್ ಕ್ರಿಸ್ಟಿಯನ್ 8-0-53-3, ಕ್ಸೇವಿಯರ್ ಡೊಹರ್ಟಿ 10-1-35-1, ಮೈಕಲ್ ಕ್ಲಾರ್ಕ್ 5-0-27-0, ಡೇವಿಡ್ ಹಸ್ಸಿ 1-0-4-0

ಫಲಿತಾಂಶ: ಶ್ರೀಲಂಕಾಕ್ಕೆ 3 ವಿಕೆಟ್ ಗೆಲುವು

ಪಂದ್ಯಶ್ರೇಷ್ಠ: ಮಾಹೇಲ ಜಯವರ್ಧನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry