ಲಂಕಾಕ್ಕೆ ಸರಣಿ ಜಯ

7

ಲಂಕಾಕ್ಕೆ ಸರಣಿ ಜಯ

Published:
Updated:

ಕೊಲಂಬೊ:ನಾಯಕನಿಗೆ ತಕ್ಕ ಆಟವಾಡಿದ ಕುಮಾರ ಸಂಗಕ್ಕಾರ (75; 105ಎಸೆತಗಳು, 4ಬೌಂಡರಿ, 1ಸಿಕ್ಸರ್) ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡವು ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯ ಗೆದ್ದು, 2-0ಯಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು.ಟಾಸ್ ಗೆದ್ದ ವಿಂಡೀಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆತಿಥೇಯ ತಂಡಕ್ಕೆ ವುಪುಲ್ ತರಂಗಾ ಮತ್ತು ತಿಲಕರತ್ನೆ ದಿಲ್ಶಾನ್ ಉತ್ತಮ ಆರಂಭ ನೀಡಿದರು. ನಂತರ ಬಂದ ಸಂಗಕ್ಕಾರ ಎರಡನೇ ವಿಕೆಟ್‌ಗೆ ತರಂಗಾ ಅವರೊಂದಿಗೆ 38 ರನ್ ಸೇರಿಸಿದರು. ನಂತರ ಜಯ ವರ್ಧನೆ (44; 51ಎಸೆತ, 2ಬೌಂಡರಿ) ಅವರೊಂದಿ ಗೆ ಮೂರನೇ ವಿಕೆಟ್ ಪಾಲು ದಾರಿಕೆಯಲ್ಲಿ 95 ರನ್ ಕಲೆ ಹಾಕಿ ದರು. ಸಂಗಕ್ಕಾರ 88 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿ ಕೊಂಡರು.ರಾಮಪಾಲ್ ಜಯ ವರ್ಧನೆ ವಿಕೆಟ್ ಪಡೆದರೆ, ಸೂಲಿ ಮೆನ್ ಬೆನ್ ಸಂಗ ಕ್ಕಾರ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು.278 ರನ್ನುಗಳ ಗುರಿ ಬೆನ್ನತ್ತಿದ ವಿಂಡೀಸ್ ಬಳಗ ಆರಂಭದಲ್ಲಿಯೇ ಎಡವಿತು. ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ವಿಂಡೀಸ್‌ನ ಕ್ರಿಸ್ ಗೇಲ್ ಫರ್ನಾಂಡೋಗೆ ಬೌಲ್ಡ್ ಆದರು. ಎರಡನೇ ಓವರ್ ಬೌಲ್ ಮಾಡಿದ ಪರೇರಾ ಎಸೆತದಲ್ಲಿ ಭರತ್, ಸಂಗಕ್ಕಾರಗೆ ಕ್ಯಾಚ್ ನೀಡಿದರು.ಈ ಸಂದರ್ಭದಲ್ಲಿ ತಂಡದ ಮೊತ್ತ 0. ನಂತರ ಡರೇನ್ ಬ್ರೇವೊ (79; 91ಎಸೆತ, 9ಬೌಂಡರಿ, 1ಸಿಕ್ಸರ್) ಮತ್ತು ಸರವಣ್ (51; 66ಎಸೆತ, 3ಬೌಂಡರಿ, 1ಸಿಕ್ಸರ್) ಮೂರನೇ ವಿಕೆಟ್‌ಗೆ 125 ರನ್ನು ಕೂಡಿಹಾಕಿ ಜಯ ಆಸೆ ಜೀವಂತವಾಗಿರಿಸಿದ್ದರು.ರಂಗನ್ ಹೆರಾತ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಆದ ಸರವಣ್ ಹೊರನಡೆದರು.ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 50 ಓವರುಗಳಲ್ಲಿ 9 ವಿಕೆಟ್‌ಗೆ 277 (ಕುಮಾರ ಸಂಗಕ್ಕಾರ 75, ಡಿಜೆ ಬ್ರೇವೋ 58ಕ್ಕೆ2, ಎಸ್‌ಜೆ. ಬೆನ್ 38ಕ್ಕೆ 4); ವೆಸ್ಟ್‌ಇಂಡಿಸ್: 49 ಓವರುಗಳಲ್ಲಿ 216 (ಬ್ರೇವೋ 79, ಸರವಣ್ 51, ಸಿಎಸ್ ಬಾಗ್ 49, ಫರ್ನಾಂಡೋ 45ಕ್ಕೆ2, ಪರೇರಾ 36ಕ್ಕೆ3, ಅಜಂತಾ ಮೆಂಡಿಸ್ 46ಕ್ಕೆ4). ಫಲಿತಾಂಶ: ಶ್ರೀಲಂಕಾ ತಂಡಕ್ಕೆ 26 ರನ್ನುಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry