ಮಂಗಳವಾರ, ನವೆಂಬರ್ 19, 2019
26 °C

ಲಂಕಾದಲ್ಲಿ ಕಾಮನ್‌ವೆಲ್ತ್ ಸಭೆಗೆ ವಿರೋಧ

Published:
Updated:

ಕೊಲೊಂಬೊ (ಪಿಟಿಐ): ಶ್ರೀಲಂಕಾದಲ್ಲಿ ನವೆಂಬರ್‌ನಲ್ಲಿ ನಡೆಯುವ ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆಯನ್ನು ಸ್ಥಳಾಂತರಿ ಸುವಂತೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ `ಕಾಮನ್‌ವೆಲ್ತ್ ವೇದಿಕೆ'ಯನ್ನು ಒತ್ತಾಯಿಸಿದೆ.`ಮಾನವ ಹಕ್ಕುಗಳ ರಕ್ಷಣೆಗೆ ಶ್ರೀಲಂಕಾ ಪ್ರಾಮಾಣಿಕ ಪ್ರಯತ್ನ ನಡೆಸದ ಹೊರತು ಆ ರಾಷ್ಟ್ರದಲ್ಲಿ ಇಂತಹ ಸಭೆಯನ್ನು ನಡೆಸಕೂಡದು' ಎಂದು ಸಂಘಟನೆ ತಾಕೀತು ಮಾಡಿದೆ.ಭಾರತ ಸ್ಪಷ್ಟನೆ: ತಮಿಳುನಾಡಿನಲ್ಲಿ ಇತ್ತೀಚೆಗೆ ಬೌದ್ಧ ಬಿಕ್ಕುಗಳ ಮೇಲೆ ನಡೆದ ದಾಳಿ ಒಂದು ಸಾಮಾನ್ಯ ಘಟನೆಯೇ ಹೊರತು ಇದಕ್ಕೆ ವಿಶೇಷ ಮಾನ್ಯತೆ ಕೊಡಬೇಕಿಲ್ಲ ಎಂದು ಭಾರತ ಸಮರ್ಥಿಸಿಕೊಂಡಿದೆ.ಈ ಕರಾಳ ಘಟನೆ ಭಾರತೀಯರ ಒಟ್ಟಾರೆ ಮನೋಭಾವವನ್ನು ಪ್ರತಿನಿಧಿಸುವುದಿಲ್ಲ ಮತ್ತು ಉಭಯ ರಾಷ್ಟ್ರಗಳ ನಡುವಿನ ಗಟ್ಟಿ ಬಾಂಧವ್ಯಕ್ಕೂ ಅಡ್ಡಿಯಾಗುವುದಿಲ್ಲ ಎಂದು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಅಶೋಕ್ ಕಾಂತಾ ಸ್ಪಷ್ಟಪಡಿಸಿದ್ದಾರೆ.

ಬೌದ್ಧ ಬಿಕ್ಕುಗಳ ಮೇಲಿನ ಹಲ್ಲೆ ಖಂಡಿಸಿ ಶ್ರೀಲಂಕಾದಲ್ಲಿ ವ್ಯಾಪಕ  ಪ್ರತಿಭಟನೆ ನಡೆಯುತ್ತಿವೆ.ಶ್ರೀಲಂಕಾ ಕ್ರಿಕೆಟ್ ಆಟಗಾರರು ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸಬಾರದು ಎಂದು ಪ್ರತಿಭಟನಾಕಾರರು ಒತ್ತಡ ಏರುತ್ತಿದ್ದಾರೆ.

ಪ್ರತಿಕ್ರಿಯಿಸಿ (+)