ಲಂಕಾ ಜಯಕ್ಕೆ ಕಠಿಣ ಗುರಿ

7
ಕ್ರಿಕೆಟ್: ಗೆಲುವಿನ ಕನಸಲ್ಲಿ ಆಸೀಸ್

ಲಂಕಾ ಜಯಕ್ಕೆ ಕಠಿಣ ಗುರಿ

Published:
Updated:

ಹೋಬರ್ಟ್:  ಆಸ್ಟ್ರೇಲಿಯಾ ತಂಡ ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ಗೆಲುವಿಗೆ 393 ರನ್‌ಗಳ ಗುರಿ ನೀಡಿದೆ.ಬೆಲೆರಿವ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಈ ಸವಾಲು ಬೆನ್ನಟ್ಟಿರುವ ಲಂಕಾ ನಾಲ್ಕನೇ ದಿನವಾದ ಸೋಮವಾರದ ಆಟದ ಅಂತ್ಯಕ್ಕೆ 37 ಓವರ್‌ಗಳಲ್ಲಿ 2 ವಿಕೆಟ್‌ಗೆ 65 ರನ್ ಗಳಿಸಿತ್ತು. ಇದೀಗ ಪ್ರವಾಸಿ ತಂಡ ಅಂತಿಮ ದಿನ ಗೆಲ್ಲಲು 328 ರನ್ ಗಳಿಸಬೇಕಿದೆ.ಇದಕ್ಕೂ ಮುನ್ನ ವಿಕೆಟ್ ನಷ್ಟವಿಲ್ಲದೆ 27 ರನ್‌ಗಳಿಂದ ಆಟ ಮುಂದುವರಿಸಿದ ಆಸೀಸ್ ತಂಡ ಎರಡನೇ ಇನಿಂಗ್ಸ್‌ನಲ್ಲಿ 278 ರನ್‌ಗಳಿಗೆ ಆಲೌಟಾಯಿತು.ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 131 ಓವರ್‌ಗಳಲ್ಲಿ 5 ವಿಕೆಟ್‌ಗೆ 450 ಡಿಕ್ಲೇರ್ಡ್ ಮತ್ತು ಎರಡನೇ ಇನಿಂಗ್ಸ್ 73.5 ಓವರ್‌ಗಳಲ್ಲಿ 278 (ಎಡ್ ಕೋವನ್ 56, ಡೇವಿಡ್ ವಾರ್ನರ್ 68, ಮೈಕಲ್ ಕ್ಲಾರ್ಕ್ 57, ಮೈಕ್ ಹಸ್ಸಿ ಔಟಾಗದೆ 31, ರಂಗನಾ ಹೆರಾತ್ 96ಕ್ಕೆ 5).ಶ್ರೀಲಂಕಾ: ಮೊದಲ ಇನಿಂಗ್ಸ್ 109.3 ಓವರ್‌ಗಳಲ್ಲಿ 336 ಮತ್ತು ಎರಡನೇ ಇನಿಂಗ್ಸ್ 37 ಓವರ್‌ಗಳಲ್ಲಿ 2 ವಿಕೆಟ್‌ಗೆ 65 (ದಿಮುತ್ ಕರುಣರತ್ನೆ 30, ಕುಮಾರ ಸಂಗಕ್ಕಾರ ಬ್ಯಾಟಿಂಗ್ 18, ಮಾಹೇಲ ಜಯವರ್ಧನೆ  ಬ್ಯಾಟಿಂಗ್ 5)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry