ಗುರುವಾರ , ಮೇ 6, 2021
31 °C

ಲಂಚ: ಎಂಜಿನಿಯರ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಸ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು 1,500 ರೂಪಾಯಿ ಲಂಚ ಪಡೆಯುತ್ತಿದ್ದ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ಕಾವಲ್‌ಬೈರಸಂದ್ರ ಉಪ ವಿಭಾಗದ ಸಹಾಯಕ ಎಂಜಿನಿಯರ್ ಪುರುಷೋತ್ತಮ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ವಿದ್ಯುತ್ ಗುತ್ತಿಗೆದಾರರಾದ ದಿಣ್ಣೂರಿನ ಮೊಹಮ್ಮದ್ ಜಾಫರ್ ಪಾಷ ಅವರು ಲಕ್ಷ್ಮಮ್ಮ ಎಂಬುವರ ಹೊಸ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಯ ಗುತ್ತಿಗೆ ಪಡೆದಿದ್ದರು. ವಿದ್ಯುತ್ ಮಾರ್ಗದ ಯೋಜನೆ ರೂಪಿಸುವಾಗಲೇ ರೂ 5,000 ಲಂಚ ನೀಡುವಂತೆ ಪುರುಷೋತ್ತಮ್ ಒತ್ತಾಯಿಸಿದ್ದರು.ತಕ್ಷಣವೇ 2,000 ರೂಪಾಯಿ ಪಡೆದುಕೊಂಡಿದ್ದರು. ವಿದ್ಯುತ್ ಕಂಬಗಳನ್ನು ಒದಗಿಸುವಾಗ ರೂ 3,000 ಪಡೆದುಕೊಂಡಿದ್ದರು.ಮಾರ್ಗ ಅಳವಡಿಸುವಾಗ ರೂ 1,500 ನೀಡುವಂತೆ ಮತ್ತೆ ಒತ್ತಾಯಿಸಿದ್ದರು. ಸಿಬ್ಬಂದಿಯ ವೆಚ್ಚಕ್ಕಾಗಿ ಈ ಮೊತ್ತ ನೀಡುವಂತೆ ಸೂಚಿಸಿದ್ದರು. ಈ ಬಗ್ಗೆ ಪಾಷ ಅವರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಮಧ್ಯಾಹ್ನ ಪಾಷ ಅವರಿಂದ ರೂ 1,500 ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದರು.`ಪುರುಷೋತ್ತಮ ಅವರನ್ನು ಲಂಚದ ಹಣದ ಸಮೇತ ಬಂಧಿಸಲಾಗಿದೆ. ಪ್ರಾಥಮಿಕ ತನಿಖೆ ಪೂರ್ಣಗೊಳಿಸಿದ ಬಳಿಕ ಆರೋಪಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುತ್ತದೆ~ ಎಂದು ಲೋಕಾಯುಕ್ತದ ಡಿಐಜಿ ಜೆ.ಅರುಣ್ ಚಕ್ರವರ್ತಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.