ಲಂಚ ಪ್ರಕರಣ: ಪೇಚಿನಲ್ಲಿ ಬ್ರಿಟನ್ ಸರ್ಕಾರ

7

ಲಂಚ ಪ್ರಕರಣ: ಪೇಚಿನಲ್ಲಿ ಬ್ರಿಟನ್ ಸರ್ಕಾರ

Published:
Updated:

ಲಂಡನ್, (ಪಿಟಿಐ): ಸೌದಿ ಅರೇಬಿಯಾಗೆ ಸಂಪರ್ಕ ಮತ್ತು ಸೈಬರ್ ಯುದ್ಧ ಸಾಮರ್ಥ್ಯ ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿದ ಗುತ್ತಿಗೆ ವ್ಯವಹಾರದಲ್ಲಿ ಎರಡು ಶತಕೋಟಿ ಪೌಂಡ್ ಭ್ರಷ್ಟಾಚಾರ ನಡೆದಿರುವ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ಬ್ರಿಟನ್ ಸರ್ಕಾರ ಸಂದಿಗ್ಧ ಸ್ಥಿತಿಯನ್ನು ಎದುರಿಸುತ್ತಿದೆ.ಗಂಭೀರ ಸ್ವರೂಪದ ಮೋಸದ ವ್ಯವಹಾರಗಳಿಗೆ ಸಂಬಂಧಿಸಿದ ತನಿಖಾ ಸಂಸ್ಥೆ ನಡೆಸುತ್ತಿರುವ ಈ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಬಹುದೇ ಎಂಬ ಬಗ್ಗೆ ಅಟಾರ್ನಿ ಜನರಲ್ ಡೊಮಿನಿಕ್ ಗ್ರಿವ್ ಪರಿಶೀಲನೆ ನಡೆಸುತ್ತಿದ್ದಾರೆ. ಬ್ರಿಟನ್‌ನ ರಕ್ಷಣಾ ಸಾಮಗ್ರಿ ಉತ್ಪಾದನಾ ಕಂಪೆನಿಯೊಂದು ಗುತ್ತಿಗೆ ವ್ಯವಹಾರ ಕುದುರಿಸಿಕೊಳ್ಳಲು ಸೌದಿ ಅರೇಬಿಯಾದ ಅರಸು ಕುಟುಂಬಕ್ಕೆ ಎರಡು ಶತಕೋಟಿ ಪೌಂಡ್ ಲಂಚ ನೀಡಿದೆ ಎಂಬ ಆಪಾದನೆ ಕೇಳಿಬಂದಿದೆ.ಲಂಚದ ಹಣವನ್ನು ಅರಸು ಕುಟುಂಬ ನಿರ್ವಹಿಸುತ್ತಿರುವ ಸಿಟ್ಜರ್‌ಲ್ಯಾಂಡ್ ಬ್ಯಾಂಕ್ ಖಾತೆಗೆ ಜಮಾ ಮಾಡಿರುವ ಬಗ್ಗೆ ಅಟಾರ್ನಿ ಜನರಲ್‌ಗೆ ತನಿಖಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು `ಸಂಡೆ ಟೈಮ್ಸ~ ವರದಿ ಮಾಡಿದೆ.ಗುತ್ತಿಗೆ ವ್ಯವಹಾರವನ್ನು ರದ್ದುಪಡಿಸಿ, ಭಯೋತ್ಪಾದಕರ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ನೀಡಲಾಗುತ್ತಿರುವ ಸಹಕಾರವನ್ನು ನಿಲ್ಲಿಸುವುದಾಗಿ ಸೌದಿ ಅರೇಬಿಯಾ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ತನಿಖೆ ಸ್ಥಗಿತಗೊಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry