ಲಂಚ ಪ್ರಕರಣ: ಸಂಪಂಗಿಗೆ ಕಾರಗೃಹ ಶಿಕ್ಷೆ

7

ಲಂಚ ಪ್ರಕರಣ: ಸಂಪಂಗಿಗೆ ಕಾರಗೃಹ ಶಿಕ್ಷೆ

Published:
Updated:
ಲಂಚ ಪ್ರಕರಣ: ಸಂಪಂಗಿಗೆ ಕಾರಗೃಹ ಶಿಕ್ಷೆ

ಬೆಂಗಳೂರು : ಕೆಜಿಎಫ್‌ನ ಬಿಜೆಪಿ ಶಾಸಕ ವೈ.ಸಂಪಂಗಿ ವಿರುದ್ಧ 2009ರಲ್ಲಿ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಪೂರ್ಣಗೊಳಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯವು ವೈ. ಸಂಪಂಗಿ ಅವರಿಗೆ ಶನಿವಾರ ಮೂರುವರೆ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯ ಆದೇಶವನ್ನು ಪ್ರಕಟಿಸಿತು.

ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್. ಕೆ. ಸುಧೀಂದ್ರ ರಾವ್ ಅವರು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಶುಕ್ರವಾರ ಪೂರ್ಣಗೊಳಿಸಿ, ಶನಿವಾರಕ್ಕೆ ಆದೇಶವನ್ನು ಕಾಯ್ದಿರಿಸಿದ್ದರು.ನಿವೇಶನ ವಿವಾದ ಇತ್ಯರ್ಥಪಡಿಸಲು ಶಾಸಕ ವೈ. ಸಂಪಂಗಿ, ಐದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕೆಜಿಎಫ್‌ನ ಉದ್ಯಮಿ ಹುಸೇನ್ ಮೊಯಿನ್ ಫರೂಕ್ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಇದಕ್ಕೆ ಸಂಬಂಧಿಸಿದಂತೆ 2009ರ ಜನವರಿ 29ರಂದು ಶಾಸಕರ ಭವನದಲ್ಲಿ ಫರೂಕ್ ಅವರಿಂದ ರೂ 50,000 ನಗದು ಮತ್ತು ರೂ 4.5 ಲಕ್ಷ ಮೌಲ್ಯದ ಚೆಕ್ ಪಡೆಯುತ್ತಿದ್ದ ಆರೋಪದ ಮೇಲೆ ಸಂಪಂಗಿ ಅವರನ್ನು ಬಂಧಿಸಲಾಗಿತ್ತು.ಪ್ರಕರಣದ ತನಿಖೆ ಪೂರ್ಣಗೊಳಿಸಿದ ಲೋಕಾಯುಕ್ತ ಪೊಲೀಸರು, 2009ರ ಆಗಸ್ಟ್‌ನಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry