ಲಂಡನ್ ಪ್ರಜೆ ಬಂಧನ

7

ಲಂಡನ್ ಪ್ರಜೆ ಬಂಧನ

Published:
Updated:

ಬೆಂಗಳೂರು: ಪಿಎಚ್‌ಡಿ ಪದವಿ ಪಡೆದಿರುವುದಾಗಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಅವುಗಳ ನೆರವಿನಿಂದ ಸಹಕಾರನಗರದ ಟ್ರಯೊ ವರ್ಲ್ಡ್ ಶಾಲೆಯಲ್ಲಿ ಮುಖ್ಯೋಪಾಧ್ಯಾಯರ ಕೆಲಸಕ್ಕೆ ಸೇರಿದ್ದ ಲಂಡನ್ ಪ್ರಜೆಯನ್ನು ಕೊಡಿಗೇಹಳ್ಳಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.`ಪಾಲ್ ಫ್ರಾನ್ಸಿಸ್ ಮಿಕಿನ್ಸ್ (38) ಬಂಧಿತ ಆರೋಪಿ. ಪಾಲ್ ವಿರುದ್ಧ ಟ್ರಯೊ ವರ್ಲ್ಡ್ ಶಾಲೆಯ ಆಡಳಿತ ಮಂಡಳಿ ಸದಸ್ಯರು ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂತು~ ಎಂದು ಈಶಾನ್ಯ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ   `ಪ್ರಜಾವಾಣಿ~ಗೆ ತಿಳಿಸಿದರು.`ಆರೋಪಿಯು ಲಂಡನ್‌ನ ಶೆಫೀಲ್ಡ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿರುವುದಾಗಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿದ್ದ. ಅಲ್ಲದೇ ಅವುಗಳ ನೆರವಿನಿಂದ ಆ ಶಾಲೆಯಲ್ಲಿ ಕೆಲಸ ಸಹ ಪಡೆದಿದ್ದ~ ಎಂದು ಹೇಳಿದರು.

ಟ್ರಯೊ ವರ್ಲ್ಡ್ ಶಾಲೆಯ 12 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಪಾಲ್‌ನನ್ನು ಜ.20ರಂದು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಇದೀಗ ಭಾರತೀಯ ದಂಡ ಸಂಹಿತೆ ಕಲಂ 420ರ ಅನ್ವಯ ವಂಚನೆ ಪ್ರಕರಣ ದಾಖಲಿಸಿಕೊಂಡು ಪುನಃ ಬಂಧಿಸಲಾಗಿದೆ ಎಂದು ರವಿಕಾಂತೇಗೌಡ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry