ಲಂಡನ್: ಭಾರತೀಯನಿಗೆ ಜೈಲು

7

ಲಂಡನ್: ಭಾರತೀಯನಿಗೆ ಜೈಲು

Published:
Updated:

 ಲಂಡನ್ (ಪಿಟಿಐ): ಬ್ರಿಟನ್ನಿನಲ್ಲೇ ಉಳಿಯುವ ಸಲುವಾಗಿ ವಲಸೆ ನಿಯಮಗಳನ್ನು ಉಲ್ಲಂಘಿಸಿ ನಕಲಿ ಮದುವೆಯಾಗಲು ಹೊರಟಿದ್ದ ಭಾರತೀಯನೊಬ್ಬನಿಗೆ ಇಲ್ಲಿನ ನ್ಯಾಯಾಲಯವೊಂದು 16 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಶಿಕ್ಷೆಗೊಳಗಾದ ವ್ಯಕ್ತಿ ಯಾರೆಂಬುದು ಇನ್ನೂ ಗೊತ್ತಾಗಿಲ್ಲ. ಈತನನ್ನು ವರಿಸಲು ಮುಂದಾಗಿದ್ದ ಮಹಿಳೆಗೂ ನ್ಯಾಯಾಲಯ 14 ತಿಂಗಳ ಸೆರೆವಾಸ ವಿಧಿಸಿದೆ.

ಕಳ್ಳಸಾಗಣೆ, ಅಕ್ರಮ ಚಟುವಟಿಕೆ ಹಾಗೂ ನಕಲಿ ಮದುವೆಗಳ ಮೇಲೆ ಬ್ರಿಟನ್ನಿನ ಗಡಿ ಭದ್ರತಾ ಜಾರಿ ನಿರ್ದೇಶನಾಲಯ ಹದ್ದಿನ ಕಣ್ಣಿರಿಸಿದ್ದು, ಇಂತಹ ಪ್ರಕರಣಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ. ನಕಲಿ ಮದುವೆಗಳನ್ನು ಪತ್ತೆ ಹಚ್ಚುವ ಸಲುವಾಗಿ ಚರ್ಚ್‌ಗಳ ಹಾಗೂ ನೋಂದಣಾಧಿಕಾರಿಗಳ ನೆರವನ್ನೂ ನಿರ್ದೇಶನಾಲಯ ಪಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry