ಲಂಬಾಣಿ ಹೆಣ್ಣು ಮಕ್ಕಳಮಾರಾಟ: ಆತಂಕ

7

ಲಂಬಾಣಿ ಹೆಣ್ಣು ಮಕ್ಕಳಮಾರಾಟ: ಆತಂಕ

Published:
Updated:

ರಾಮನಗರ : ಅಧಿಕಾರಕ್ಕೆ ಬರುವ ಪಕ್ಷಗಳು ಲಂಬಾಣಿ ಜನಾಂಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿಲ್ಲ ಎಂದು ಕರ್ನಾಟಕ ಪ್ರದೇಶ ಲಂಬಾಣಿ ಬಂಜಾರ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಕೃಷ್ಣಾನಾಯಕ್ ದೂರಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿಗೂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಕ್ಕಳ ಮಾರಾಟ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಹಿಂದೆ ರಾಯಚೂರಿನಲ್ಲಿ ಮೂರು ತಿಂಗಳ ಹಸುಗೂಸಿನ ಮಾರಾಟ ನಡೆದಿತ್ತು.

 

ಇದರಲ್ಲಿ ತೆಲುಗಿನ ಖ್ಯಾತ ನಟರೊಬ್ಬರು ಶಾಮೀಲಾಗಿದ್ದರು. ಆದರೆ ತಮ್ಮ ರಾಜಕೀಯ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿ ಹಾಕಿದರು ಎಂದರು.ವಯೋವೃದ್ಧರ ಜೊತೆ ಅಪ್ರಾಪ್ತ ಲಂಬಾಣಿ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲಾಗುತ್ತಿದೆ. ಅಲ್ಲದೆ ಕೂಲಿಗಾಗಿ ಲಂಬಾಣಿಗರು ಹೊರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry