ಲಕ್ಕುಂಡಿ ಎಪಿಎಂಸಿ ಉಪಚುನಾವಣೆ: ಸಿದ್ಧಲಿಂಗೇಶಗೌಡ ಪಾಟೀಲಗೆ ಗೆಲುವು

ಮಂಗಳವಾರ, ಜೂಲೈ 23, 2019
20 °C

ಲಕ್ಕುಂಡಿ ಎಪಿಎಂಸಿ ಉಪಚುನಾವಣೆ: ಸಿದ್ಧಲಿಂಗೇಶಗೌಡ ಪಾಟೀಲಗೆ ಗೆಲುವು

Published:
Updated:

ಗದಗ: ತಾಲ್ಲೂಕಿನ ಲಕ್ಕುಂಡಿ ಕೃಷಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿದ್ದಲಿಂಗೇಶಗೌಡ ಪಾಟೀಲ ಅವರು 1,225 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಎಪಿಎಂಸಿ ಸದಸ್ಯ ಅಜ್ಜಣ್ಣ ಪಾಟೀಲ ಅವರ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನರಗುಂದ ಮತ್ತು ರೋಣ ವಿಧಾನಸಭೆಯ ವ್ಯಾಪ್ತಿಗೆ ಒಳಪಡುವ ಕೃಷಿ ಕ್ಷೇತ್ರವು ಪ್ರತಿಷ್ಠೆಯ ಕಣವಾಗಿ ರೂಪುಗೊಂಡಿತ್ತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾಗುವ ಮೂಲಕ ವಿಜಯ ಸಾಧಿಸಿದರು.ಲಕ್ಕುಂಡಿ ಕೃಷಿ ಕ್ಷೇತ್ರದ ವ್ಯಾಪ್ತಿಯಲ್ಲಿ ಗದಗ ತಾಲ್ಲೂಕಿನ ಲಕ್ಕುಂಡಿ, ಹರ್ಲಾಪುರ, ತಿಮ್ಮೋಪುರ, ಪಾಪನಾಶಿ, ಪಾಪನಾಶಿ ತಾಂಡಾ ಹಾಗೂ ಸಂಭಾಪುರ ಗ್ರಾಮಗಳು ಒಳಪಟ್ಟಿವೆ. ಒಟ್ಟು 7,340 ಮತಗಳನ್ನು ಹೊಂದಿರುವ ಈ ಕ್ಷೇತ್ರಕ್ಕೆ  ಜುಲೈ 2 ರಂದು ಉಪಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ 2,501 ಮತಗಳು ಚಲಾವಣೆಯಾಗಿತ್ತು. ನಗರದ ಎಪಿಎಂಸಿಯಲ್ಲಿ ಬುಧವಾರ ನಡೆದ ಮತ ಎಣಿಕೆ ಕಾರ್ಯದಲ್ಲಿ  ಸಿದ್ಧಲಿಂಗೇಶಗೌಡ ಪಾಟೀಲ 1,702 ಮತಗಳು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಂಬರೀಶ್ ಕರೇಕಲ್ ಅವರು 477 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವೆಂಕಟೇಶ ಕುಲಕರ್ಣಿ 250 ಮತಗಳನ್ನು ಪಡೆದರು.ಪಾಟೀಲ ಅವರು ವಿಜೇತರಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಮಾಜಿ ಶಾಸಕ ಡಿ. ಆರ್. ಪಾಟೀಲ, ಕೆಪಿಸಿಸಿ ಸದಸ್ಯ ವಾಸಣ್ಣ ಕುರಡಗಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತಪ್ಪ ಕಲಕೇರಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಉಮಚಗಿ, ಮಾಜಿ ಸದಸ್ಯ ಶಾಂತಯ್ಯ ಗಂಧದ, ಫಕ್ಕಿರಪ್ಪ ಹೆಬಸೂರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಚಪ್ಪ ಪೂಜಾರ, ಬಸವರಾಜ ಮೂಲಿಮನಿ, ಡಿ. ಎಚ್. ಮುಲ್ಲಾ,  ದಶರಥ ಗಾಣಿಗೇರ, ವಿದ್ಯಾದರ ದೊಡ್ಡಮನಿ, ಅಶೋಕ ಮಂದಾಲಿ, ಎಂ. ಎಂ. ಹುಬ್ಬಳ್ಳಿ, ಅಂದಾನೆಪ್ಪ ಕಣವಿ, ಮಂಜುನಾಥ ಮುಳಗುಂದ, ಮಂಜುನಾಥ ನೋಟಗಾರ, ಮಂಜುನಾಥ ಶೆಲವಡಿ ಅಭ್ಯರ್ಥಿಯನ್ನು ಅಭಿನಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry