ಗುರುವಾರ , ಮೇ 13, 2021
34 °C

ಲಕ್ಷಾಧಿಪತಿಗಳ ಸಂಖ್ಯೆ ದುಪ್ಪಟ್ಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗರಿಷ್ಠ ಆರ್ಥಿಕ ಪ್ರಗತಿ, ಷೇರು ಮಾರುಕಟ್ಟೆಗಳ ಲಾಭ ಮತ್ತು ಸಂಪತ್ತಿನ ಮೌಲ್ಯವರ್ಧನೆಯಿಂದ ಏಷ್ಯಾಧ ಲಕ್ಷಾಧಿಪತಿಗಳ ಸಂಖ್ಯೆ 2015ರ ವೇಳಗೆ ಎರಡು ಪಟ್ಟು ಹೆಚ್ಚಾಗಲಿದ್ದು, ಒಟ್ಟು ಸಂಖ್ಯೆ 4.03 ದಶಲಕ್ಷದಷ್ಟಾಗಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.ಈ ಲಕ್ಷಾಧಿಪತಿಗಳು ತಮ್ಮ ಬಳಿ ಇರುವ ಸಂಪತ್ತಿನಿಂದ ಸದ್ಯ ವಾರ್ಷಿಕ ಕನಿಷ್ಠ 1 ಶತಕೋಟಿ ಡಾಲರ್‌ನಷ್ಟು ಲಾಭ (ರೂ. 4500 ಕೋಟಿ) ಪಡೆಯುತ್ತಿದ್ದಾರೆ. ಮುಂದಿನ ಐದು ವರ್ಷದಲ್ಲಿ ಈ ಮೊತ್ತ ರೂ. 2.5 ಲಕ್ಷ ಕೋಟಿಗಳಿಗೆ ಏರಲಿದೆ ಎಂದು ಏಷ್ಯಾ ಸಂಪತ್ತು ಮಾರುಕಟ್ಟೆ ಅಧ್ಯಯನ ತಂಡವೊಂದು ತಿಳಿಸಿದೆ. ಏಷ್ಯಾದ ಮುಂಚೂಣಿ ಹೂಡಿಕೆ ಬ್ಯಾಂಕಿಂಗ್ `ಸಿಎಲ್‌ಎಸ್‌ಎ~ ಸಿದ್ಧಪಡಿಸಿರುವ `ಏಷ್ಯಾದ ಸಂಪತ್ತು~ ವರದಿ ಪ್ರಕಾರ 2010ರ ಅಂತ್ಯದ ವೇಳೆಗೆ ಭಾರತದಲ್ಲಿ 1,73,000 ಲಕ್ಷಾಧಿಪತಿಗಳು ಇದ್ದರು. ಇವರ ಒಟ್ಟು ಸಂಪತ್ತು 949 ಶತಕೋಟಿ ಡಾಲರ್ ( ರೂ.42,00,000 ಕೋಟಿ) ಎಂದು ಅಂದಾಜಿಸಲಾಗಿದೆ. ಈ ಮೊತ್ತವು 2015ರ ವೇಳೆಗೆ ಎರಡು ಪಟ್ಟು ಹೆಚ್ಚಾಗಲಿದ್ದು.  ಗರಿಷ್ಠ ಸಂಪತ್ತು ಹೊಂದಿರುವವರ ಸಂಖ್ಯೆ 4,03,000ಕ್ಕೆ ಏರಲಿದೆ. ಏಷ್ಯಾದಲ್ಲೇ ಸಂಪತ್ತಿನ ವೃದ್ಧಿಯಲ್ಲಿ ಭಾರತ ಮುಂದಿದೆ. ಅತ್ಯುತ್ತಮ ಆರ್ಥಿಕ ವೃದ್ಧಿ ದರ ಲಕ್ಷಾಧಿಪತಿಗಳ ಬೊಕ್ಕಸ ಹಿಗ್ಗುವಂತೆ ಮಾಡಿದೆ. ಷೇರುಪೇಟೆಗಳಿಂದ ಇವರ ಖಜಾನೆಗೆ ಶೇ 14ರಷ್ಟು ಲಾಭಾಂಶ ಹರಿದುಬಂದಿದೆ. ನಿವೇಶನ, ಸ್ಥಿರಾಸ್ತಿಗಳ ಮೌಲ್ಯ ಶೇ 5ರಷ್ಟು ಹೆಚ್ಚಿದೆ. ಚೀನಾವನ್ನು ಹೊರತುಪಡಿಸಿದರೆ (ಶೇ 44) ಗರಿಷ್ಠ ಸಂಪತ್ತು ಹೊಂದಿರುವ ಸಂಖ್ಯೆಯಲ್ಲಿ ಭಾರತ (ಶೇ 15) ಎರಡನೆಯ ಸ್ಥಾನದಲ್ಲಿದೆ.ಭಾರತದಲ್ಲಿ ಐದು ಸಾವಿರ ಜನಸಂಖ್ಯೆಗೆ ಒಬ್ಬ ಲಕ್ಷಾಧಿಪತಿ ಇದ್ದರೆ, ಚೀನಾದಲ್ಲಿ 2 ಸಾವಿರ ಜನಸಂಖ್ಯೆಗೆ ಒಬ್ಬರಿದ್ದಾರೆ.ಭಾರತದ ಲಕ್ಷಾಧಿಪತಿಗಳ ಸಂಖ್ಯೆ  ಮುಂದಿನ ಐದು ವರ್ಷಗಳಲ್ಲಿ  2 ಸಾವಿರ ಜನರಿಗೆ ಒಬ್ಬರಂತೆ ಹಿಗ್ಗಲಿದೆ. ಸದ್ಯ ಚೀನಾದಲ್ಲಿ 5 ಲಕ್ಷ ಲಕ್ಷಾಧಿಪತಿಗಳಿದ್ದು, ಇವರ ಸಂಖ್ಯೆ 2015ರವೇಳೆಗೆ 9 ಲಕ್ಷಕ್ಕೆ ಏರಲಿದೆ. ಇವರ ಸಂಪತ್ತಿನ ಒಟ್ಟು ಮೌಲ್ಯ  9 ಲಕ್ಷ ಕೋಟಿ ಡಾಲರ್‌ಗಳಷ್ಟು ಆಗಿರಲಿದೆ ಎಂದು ಅಂದಾಜಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.