ಲಕ್ಷ್ಮಣತೀರ್ಥಕ್ಕೆ ತ್ಯಾಜ್ಯ ನೀರು: ಆಕ್ರೋಶ

7

ಲಕ್ಷ್ಮಣತೀರ್ಥಕ್ಕೆ ತ್ಯಾಜ್ಯ ನೀರು: ಆಕ್ರೋಶ

Published:
Updated:

ಹುಣಸೂರು: ಪಟ್ಟಣದ ತ್ಯಾಜ್ಯ ನೀರು ಲಕ್ಷ್ಮಣತೀರ್ಥ ನದಿ ಸೇರುತ್ತಿದ್ದು, ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಮಧ್ಯ ಭಾಗದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಗೆ ಒಳಚರಂಡಿ ನೀರು ಸೇರುತ್ತಿದ್ದು,, ಈ ಬಗ್ಗೆ ಪುರಸಭೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ಚಂದ್ರನಾಯಕ ಅರೋಪಿಸಿದ್ದಾರೆ.ನದಿ ನೀರು ಕಲುಷಿತಗೊಳ್ಳದಂತೆ ಅನೇಕ ಯೋಜನೆಗಳು ಪಟ್ಟಣಕ್ಕೆ ಹರಿದು ಬಂದಿದ್ದರೂ ಪುರಸಭೆ ಸೂಕ್ತ ರೀತಿಯಲ್ಲಿ ಕಾಮಗಾರಿ ನಿರ್ವಹಿಸದೇ ಇರುವುದರಿಂದ ಒಳಚರಂಡಿ ನೀರು ಸಂಗ್ರಹ ಕೇಂದ್ರ ಶಿಥಿಲಗೊಂಡಿದೆ. ಈ ಬಗೆ್ಗ ಹಲವು ಬಾರಿ ಅಧಿಕಾರಿಗಳ ಗಮನಕೆ್ಕ ತಂದಿದ್ದರೂ ದುರಸ್ತಿ ಮಾಡಿಲ್ಲ.ಕಾರಣ ನದಿಗೆ ಕೊಳಚೆ ನೀರು ಸೇರುತ್ತಿದೆ ಎಂದರು. ಸಂಪೂರ್ಣ ಒಳಚರಂಡಿ ಯೋಜನೆ ಜಾರಿಗೊಳಿಸಲು ಕಳೆದ 5 ವರ್ಷದಿಂದ ಯಾವುದೇ ಕ್ರಮ ತೆಗೆದುಕೊಳ್ಳದೇ ಕಾಲ ವ್ಯಯ ಮಾಡಿರುವುದು ವಿಷಾದನೀಯ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry