ಲಕ್ಷ್ಮಣ್ ಮಾರಾಟವಾಗಲಿಲ್ಲ!

7

ಲಕ್ಷ್ಮಣ್ ಮಾರಾಟವಾಗಲಿಲ್ಲ!

Published:
Updated:

ಬೆಂಗಳೂರು: ಅನುಭವಿ ಬ್ಯಾಟ್ಸ್‌ಮನ್ ಹಾಗೂ ಟೆಸ್ಟ್ ಪರಿಣತ ವಿ.ವಿ.ಎಸ್.ಲಕ್ಷ್ಮಣ್ ಅವರನ್ನು ಇಲ್ಲಿ ಖರೀದಿಸುವವರೇ ಇರಲಿಲ್ಲ. ಅವರತ್ತ ಯಾವ ಫ್ರಾಂಚೈಸಿಗಳೂ ತಲೆ ಎತ್ತಿ ನೋಡಲಿಲ್ಲ.ಹಾಗಾಗಿ ಐಪಿಎಲ್ ಐದನೇ ಅವತರಣಿಕೆಗೆ ಶನಿವಾರ ನಗರದಲ್ಲಿ ನಡೆದ ಹರಾಜಿನಲ್ಲಿ ಹೈದರಾ  ಬಾದ್‌ನ ಈ ಆಟಗಾರ ಮಾರಾಟವಾಗಲಿಲ್ಲ. ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಇಂಗ್ಲೆಂಡ್‌ನ     ರಿಚರ್ಡ್ ಮೆಡ್ಲೆ ಅವರು ವಿವಿಎಸ್ ಹೆಸರನ್ನು ಕೂಗಿದಾಗ ಪಂಚತಾರಾ ಹೋಟೆಲ್‌ನ ಆ ಕೊಠಡಿಯಲ್ಲಿ ಮೌನ.2008ರಲ್ಲಿ ಐಪಿಎಲ್ ಆರಂಭವಾದಾಗ ಲಕ್ಷ್ಮಣ್ `ಐಕಾನ್ ಪ್ಲೇಯರ್~ ಎನಿಸಿದ್ದರು. ಅವರು ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡ ಮುನ್ನಡೆಸಿದ್ದರು. ಆದರೆ ಬಳಿಕ ಅವರಿಗೆ ಟ್ವೆಂಟಿ-20 ಕ್ರಿಕೆಟ್‌ನ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ.ಅಷ್ಟು ಮಾತ್ರವಲ್ಲದೇ, ಇತ್ತೀಚೆಗೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ವೈಫಲ್ಯ ಕಂಡಿದ್ದು ಮತ್ತೊಂದು ಕಾರಣ. ಹಾಗಾಗಿ 37 ವರ್ಷ ವಯಸ್ಸಿನ ಈ ಆಟಗಾರನತ್ತ ಯಾರೂ ಗಮನ ಹರಿಸಲಿಲ್ಲ.ಮಾರಾಟವಾಗದೇ ಉಳಿದ ಮತ್ತೊಬ್ಬ ಭಾರತದ ಆಟಗಾರ ಎಂದರೆ ವೇಗಿ ವಿ.ಆರ್.ವಿ.ಸಿಂಗ್. ಈ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡಿದ್ದ ಈ ಆಟಗಾರ ಕಡೆಗೆ ಯಾವ ಫ್ರಾಂಚೈಸಿಯೂ ಚಿತ್ತ ಹರಿಸಲಿಲ್ಲ.  ಹಾಗೇ, ಹರಾಜು ಪಟ್ಟಿಯ್ಲ್ಲಲಿ ವಿದೇಶದ 11 ತಂಡಗಳ 136 ಆಟಗಾರರು ಇದ್ದರು. 36 ಮಂದಿ ಆಟಗಾರರು ಮಾತ್ರ ಮಾರಾಟವಾದರು. ಆದರೆ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ವಿಂಡೀಸ್ ಆಟಗಾರರತ್ತ ಫ್ರಾಂಚೈಸಿಗಳ ಮಾಲೀಕರು ಹೆಚ್ಚು ಗಮನ ಹರಿಸಲಿಲ್ಲ. ಇದಕ್ಕೆ ಕಾರಣ ಐಪಿಎಲ್ ಟೂರ್ನಿ ಏಪ್ರಿಲ್ ನಾಲ್ಕಕ್ಕೆ ಶುರುವಾಗಲಿದೆ. ಈ ಸಂದರ್ಭದಲ್ಲಿ ಈ ತಂಡಗಳು ವಿವಿಧ ಸರಣಿಗಳಲ್ಲಿ ಪಾಲ್ಗೊಳ್ಳುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry