ಲಕ್ಷ್ಮಣ ಅಧ್ಯಕ್ಷ, ಬಾಲಮ್ಮ ಉಪಾಧ್ಯಕ್ಷೆ

7

ಲಕ್ಷ್ಮಣ ಅಧ್ಯಕ್ಷ, ಬಾಲಮ್ಮ ಉಪಾಧ್ಯಕ್ಷೆ

Published:
Updated:

ದೇವದುರ್ಗ: ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳ ಪಕ್ಷ ಬಹುಮತ ಪಡೆದಿದ್ದು, ಮಂಗಳವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಿರೀಕ್ಷೆ ಯಂತೆ ಜೆಡಿಎಸ್ ಅಭ್ಯರ್ಥಿಗಳು 20 ತಿಂಗಳ ಮೊದಲನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿ ಆಡಳಿತದ ಚುಕ್ಕಾಣಿ ಹಿಡಿದರು.ಪೂರ್ವ ಮಾಹಿತಿಯಂತೆ ಮಂಗಳ ವಾರ ಮುಂಜಾನೆ 10ರಿಂದ 11 ಗಂಟೆವರೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಸಮಯ ನಿಗದಿಗೊಳಿ ಸಲಾಗಿತ್ತು.ಚುನಾವಣಾ ಅಯೋಗದ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾದ ಕಾರಣ ಕೆ. ಇರಬಗೇರಾ ತಾ.ಪಂ. ಕ್ಷೇತ್ರದ ಜೆಡಿಎಸ್ ಪಕ್ಷದಿಂದ ಚುನಾಯಿತ ಗೊಂಡಿದ್ದ ಲಕ್ಷ್ಮಣ ರಾಠೋಡ್ ಅವರು ಅಧ್ಯಕ್ಷ ಸ್ಥಾನಕ್ಕೆ ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರೆ ಹೇಮನೂರು ತಾ.ಪಂ ಕ್ಷೇತ್ರದಿಂದ ಚುನಾಯಿತ ಗೊಂಡಿದ್ದ ಬಾಲಮ್ಮ ಹನು ಮಂತ್ರಾಯ ಅವರು ಉಪಾಧ್ಯಕ್ಷ ಸ್ಥಾನಕ್ಕೆ ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದ್ದರು.ಸಭೆ: ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಸಂಬಂಧಿಸಿದಂತೆ ಚುನಾ ವಣಾಧಿಕಾರಿಯಾಗಿ ಆಗಮಿಸಿದ್ದ ರಾಯಚೂರು ಸಹಾಯಕ ಆಯುಕ್ತ ಪಿ.ಡಿ. ಚವ್ಹಾಣ ಅವರ ಅಧ್ಯಕ್ಷ ತೆಯಲ್ಲಿ ಮಧ್ಯಾಹ್ನ ಒಂದು ಗಂಟೆಗೆ ತಾ.ಪಂ. ಸಭಾಂಗಣದಲ್ಲಿ ಸರ್ವ ಸದಸ್ಯರ ಸಭೆಯನ್ನು ಕರೆಯಲಾ ಯಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೇವಲ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ ಇಬ್ಬರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಅಂಗೀಕರಿಸಲಾಯಿತು. ನಂತರ ಅವಿರೋಧವಾಗಿ ಆಯ್ಕೆ ಯಾದ ಬಗ್ಗೆ ಅಧಿಕೃತವಾಗಿ ಸಭೆಯಲ್ಲಿ ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು.ಅಭಿನಂದನೆ: ನೂತನವಾಗಿ ಆಯ್ಕೆ ಯಾದ ನಂತರ ಅಧ್ಯಕ್ಷ ಲಕ್ಷ್ಮಣ ರಾಠೋಡ್ ಮತ್ತು ಉಪಾಧ್ಯಕ್ಷೆ ಬಾಲಮ್ಮ ಹನುಮಂತ್ರಾಯ ಅವ ರನ್ನು ಚನಾವಣಾಧಿಕಾರಿ ಪಿ.ಡಿ. ಚವ್ಹಾಣ, ತಹಸೀಲ್ದಾರ್ ಮಾರೆಪ್ಪ, ತಾಲ್ಲೂಕು ಯೋಜನಾಧಿಕಾರಿ ಎಸ್. ಎಚ್. ಕೊಪ್ಪರದ್, ಸಿಪಿಐ ಎಸ್.ವೈ. ಹುಣಿಶಿಕಟ್ಟಿ ಅಭಿನಂದಿಸಿದರು.ಗೈರು: ಒಟ್ಟು 21 ಸದಸ್ಯರನ್ನು ಒಳಗೊಂಡ ತಾ.ಪಂ.ಯಲ್ಲಿ ಜೆಡಿಎಸ್ ಪಕ್ಷ 13 ಜನ ಸದಸ್ಯರನ್ನು ಹೊಂದುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಉಳಿದ ಸ್ಥಾನಗಳ ಪೈಕಿ ಆಡಳಿತರೂಢ ಬಿಜೆಪಿ ಪಕ್ಷ 05 ಮತ್ತು ಕಾಂಗ್ರೆಸ್ ಪಕ್ಷದ 03 ಜನ ಸದಸ್ಯರನ್ನು ಹೊಂದಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಜೆಡಿಎಸ್ ಪಕ್ಷದ 13 ಜನ ಸದಸ್ಯರು ಮತ್ತು ಮಲ್ದಕಲ್ ಕ್ಷೇತ್ರದ ಬಿಜೆಪಿ ಸದಸ್ಯ ಶ್ರೀನಿವಾಸ ದೇಸಾಯಿ ಮತ್ತು ಗಬ್ಬೂರು ಕ್ಷೇತ್ರದ ಬಿಜೆಪಿ ಜನಾರ್ದನ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಮೂರು ಜನ ಮತ್ತು ಬಿಜೆಪಿ ಪಕ್ಷದ ಮೂರು ಜನ ಸದಸ್ಯರು ಸಭೆಯಲ್ಲಿ ಗೈರು ಹಾಜರಾಗಿರುವುದು ಕಂಡು ಬಂದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry