ಗುರುವಾರ , ಏಪ್ರಿಲ್ 22, 2021
29 °C

ಲಕ್ಷ್ಮಮ್ಮದೇವಿ ನೂತನ ರಥ ನಿರ್ಮಾಣಕ್ಕೆ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಮುನ್ನೂರು ಕಾಪು ಸಮಾಜದ ಕುಲದೇವತೆ ಲಕ್ಷ್ಮಮ್ಮದೇವಿ ಜಾತ್ರೆ ಹಾಗೂ ರಥೋತ್ಸವ ಹಿನ್ನೆಲೆಯಲ್ಲಿ ಮುನ್ನೂರು ಕಾಪು ಸಮಾಜವು ನೂತನ ರಥ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು, ಸೋಮವಾರ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಎ ಪಾಪಾರೆಡ್ಡಿ, ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಹಾಗೂ ಸಮಾಜದ ಮುಖಂಡರು ಪೂಜೆ ಸಲ್ಲಿಸಿದರು.ಮಾಜಿ ಶಾಸಕ ಎ ಪಾಪಾರೆಡ್ಡಿ ಮಾತನಾಡಿ, ಸಮಾಜದ ಪೂರ್ವಜರು ಅಂದುಕೊಂಡ ಕನಸು ನನಸಾಗುತ್ತಿದೆ. ಮೂಲತಃ ಕೃಷಿಕ ಸಮಾಜವಾದ ಮುನ್ನೂರು ಕಾಪು ಸಮಾಜವು ಈಗ ಎಲ್ಲ ಕ್ಷೇತ್ರಗಳಲ್ಲಿ ಏಳ್ಗೆ ಹೊಂದಿದೆ. ಸಮಾಜ ಬಾಂಧವರ ಒಕ್ಕಟ್ಟಿನಿಂದ ಅನೇಕ ಅಭಿವೃದ್ಧಿ ಕೆಲಸ ಕಾರ್ಯ ನಡೆಯುತ್ತಿವೆ ಎಂದರು.ನೂತನ ರಥ ನಿರ್ಮಾಣಕ್ಕೆ 13 ಟನ್ ತೇಗ(ಟೀಕ್ ಉಡ್) ಕಟ್ಟಿಗೆ ನಗರಕ್ಕೆ ಸಿಂಧನೂರಿನಿಂದ ತರಲಾಗಿದೆ. ಸಮಾಜ ಬಾಂಧವರು ಉದಾರ ಮನಸ್ಸಿನಿಂದ ದೊರಕಿಸಿದ 25 ಲಕ್ಷ ವೆಚ್ಚದಲ್ಲಿ ಸುಂದರ ರಥ ನಿರ್ಮಾಣವಾಗಲಿದೆ. ಈ ರಥ ನಿರ್ಮಾಣವನ್ನು ಹಟ್ಟಿಯ ಅರವಿಂದಪ್ಪ ಕಲಾವಿದರು ಮಾಡಲಿದ್ದಾರೆ. ಕುಲದೇವತೆ ಜಾತ್ರೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಹೇಳಿದರು.ಸಮಾಜ ಮುಖಂಡರಾದ ಜಿ. ಬಸವರಾಜರೆಡ್ಡಿ ಅವರು ಮಾತನಾಡಿ,ಸಮಾಜ ಏಳ್ಗೆಗೆ ಪೂರಕ ಕಾರ್ಯಕ್ಕೆ ಕುಲದೇವತೆ ಆಶೀರ್ವಾದಿಂದ ಸಮಾಜ ಬಾಂಧವರ ಸಹಕಾರ ಸದಾ ಕಾಲ ಇರುತ್ತದೆ ಎಂದರು.ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಸಮಾಜದ ಕಾರ್ಯಾಧ್ಯಕ್ಷ ಎಂ ನಾಗಿರೆಡ್ಡಿ, ಉಪಾಧ್ಯಕ್ಷ ಎನ್.ಎಸ್ ಈರಣ್ಣ, ರಾಳ್ಳ ತಿಮ್ಮಾರೆಡ್ಡಿ, ಕ್ರೀಡಾ ಸಮಿತಿ ಅಧ್ಯಕ್ಷ ಪುಂಡ್ಲ ನರಸರೆಡ್ಡಿ, ಸಂಸ್ಥೆಯ ಖಜಾಂಚಿ ಕುಕ್ಕಲ ನರಸಿಂಹಲು, ಕಾರ್ಯದರ್ಶಿ ಎಸ್ ವೆಂಕಟರೆಡ್ಡಿ, ಫಕೀರಗಾರು, ನರಸರೆಡ್ಡಿ, ಬುಡತಪ್ಪಗಾರು ಆಂಜನೇಯ, ಕೊಂದೊಡ್ಡಿ ರಂಗರೆಡ್ಡಿ, ಗುಡ್ಸಿ ಭೀಮರಡ್ಡಿ, ಯು ಸಣ್ಣ ಅಯ್ಯಾಳಪ್ಪ, ಬಿ ತಿಮ್ಮಾರೆಡ್ಡಿ, ಬಿ ಶೇಖರರೆಡ್ಡಿ, ಸೂಗಣಗಾರ ಜನಾರ್ದನರೆಡ್ಡಿ, ದಾಸರಯ್ಯಗಾರ ಗೋಪಾಲರೆಡ್ಡಿ, ಯು ಗೋವಿಂದರೆಡ್ಡಿ, ಎಸ್ ದುಬ್ಬನ್ನ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು. ಕೆ ರವಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.