`ಲಕ್ಷ್ಮೀ'

7

`ಲಕ್ಷ್ಮೀ'

Published:
Updated:
`ಲಕ್ಷ್ಮೀ'

ರಾಘವ ಲೋಕಿ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್ ನಾಯಕರಾಗಿ ನಟಿಸಿರುವ `ಲಕ್ಷ್ಮೀ' ಈ ವಾರ ತೆರೆಕಾಣುತ್ತಿದೆ. ಭರಣಿ ಮಿನರಲ್ಸ್‌ನ ಎರಡನೇ ಚಿತ್ರವಿದು. ದೇಶಪ್ರೇಮಿಯೊಬ್ಬನ ಕಥೆಯುಳ್ಳ ಈ ಚಿತ್ರದ ಹಾಡುಗಳು ಈಗಾಗಲೇ ಜನಪ್ರಿಯತೆ ಗಳಿಸಿವೆ.

ಕರ್ನಾಟಕದ ಅನೇಕ ತಾಣಗಳಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಚಿತ್ರೀಕರಣ ನಡೆಸಲಾಗಿದೆ. ತಾಂತ್ರಿಕವಾಗಿ ಹಲವು ಹೊಸ ಪ್ರಯೋಗಗಳನ್ನು ಒಳಗೊಂಡಿರುವ ಚಿತ್ರವಿದು. ಗ್ರಾಫಿಕ್ಸ್ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳಲಾಗಿದೆ.

ಬಿ.ಆರ್. ದುಗ್ಗಿನೆನಿ ಮತ್ತು ಅಧಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗುರುಕಿರಣ್ ಸಂಗೀತ ಚಿತ್ರಕ್ಕಿದೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಎಂ.ಎಸ್. ರಮೇಶ್ ಸಂಭಾಷಣೆ, ಇಸ್ಮಾಯಿಲ್ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry