ಶುಕ್ರವಾರ, ಏಪ್ರಿಲ್ 23, 2021
28 °C

ಲಕ್ಷ್ಮೀರಂಗನಾಥ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ತಾಲ್ಲೂಕಿನ ಹಳ್ಳೂರು ಗ್ರಾಮದ ಲಕ್ಷ್ಮೀರಂಗನಾಥ, ದುರ್ಗಾದೇವಿ ರಥೋತ್ಸವ ಹಾಗೂ ಸ್ವಾಮಿಯ ಪೀಠ, ನೂತನವಾಗಿ ನಿರ್ಮಿಸಿರುವ ಕಬ್ಬಿಣದ ತೇರು ಮತ್ತು ಬಂಗಾರದ ಕಳಸಾರೋಹಣದ ನಿಮಿತ್ಯ ಏ.12ರಿಂದ 18ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುವವು. ಏ.12ರಂದು ಬೆಳಿಗ್ಗೆ 4.30 ಗಂಟೆಗೆ ಭದ್ರಾವತಿಯ ರಮೇಶ ಭಟ್ ತರಳಿಮಠ ಆಚಾರತ್ವದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಕಂಕಣಧಾರಣೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯುವುದು. ಏ.13ಕ್ಕೆ ನೂತನ ರಥದ ಪ್ರತಿಷ್ಠಾಪನೆ ಹಾಗೂ ಸುವರ್ಣ ಕಳಸಾರೋಹಣದ ನಿಮಿತ್ತ ಮಹಾಗಣಪತಿ ಪೂಜೆ, ಗಣಪತಿ ಹೋಮ ನಡೆಯುವುದು.ಏ.17ರಂದು ಬೆಳಿಗ್ಗೆ ಹೂವಿನ ರಥೋತ್ಸವ, ಮಹಾಸುದರ್ಶನ ಹೋಮ ಮತ್ತು ಕಲಾವೃದ್ಧಿ ಹೋಮ ನಡೆಯುವುದು. ಸಂಜೆ 6ಕ್ಕೆ ಗೋಧೂಳಿ ಲಗ್ನದಲ್ಲಿ ಮಹಾರಥೋತ್ಸವವು ವೈಭವದಿಂದ ನಡೆಯುವುದು. ಏ.18ರಂದು ಬೆಳಿಗ್ಗೆ ಊರಿನ ತೇರು ನಡೆಯುವುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.