ಮಂಗಳವಾರ, ನವೆಂಬರ್ 12, 2019
19 °C
ಹರಪನಹಳ್ಳಿ, ಮೆದಿಕೆರೆಯಲ್ಲಿ ಅದ್ದೂರಿ ಆಂಜನೇಯ ಸ್ವಾಮಿ ರಥೋತ್ಸವ

ಲಕ್ಷ್ಮೀರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ

Published:
Updated:
ಲಕ್ಷ್ಮೀರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ

ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿಯ ಧಾರ್ಮಿಕದತ್ತಿ ಇಲಾಖೆಗೆ ಸೇರಿದ ಮೇಜರ್ ಮುಜರಾಯಿ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿ `ದವನ ಪೂರ್ಣಿಮಾ ಬ್ರಹ್ಮ ರಥೋತ್ಸವ' ಸಾಂಪ್ರದಾಯಿಕ ರೀತಿ ಅದ್ದೂರಿಯಾಗಿ ಗುರುವಾರ ಜರುಗಿತು.ಪುಣ್ಯಾಹ ವಾಚನ, ರಥಶಾಂತಿ, ಶ್ರೀಚಕ್ರ ಪೂಜೆ, ಗ್ರಾಮ ಪ್ರದಕ್ಷಣೆ, ರಥದ ಗಾಲಿ ಹಾಗೂ ಅಷ್ಟದಿಕ್ಪಾಲಕರಿಗೆ ಬಲಿಹಾಕಿದ ನಂತರ ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಆಗಮಿಸಿತು.ದೇವಾಲಯದ ಧರ್ಮದರ್ಶಿ ಸಮಿತಿ ಅಧ್ಯಕ್ಷ ದೇಶಪಾಂಡೆ ರಂಗನಾಥರಾವ್ ರಥ ಪೂಜೆ ಮಾಡಿದರು. ಧರ್ಮದರ್ಶಿ ಸಮಿತಿ ಸದಸ್ಯರು ಇದ್ದರು.

ಭಕ್ತರು ಬಾಳೆಹಣ್ಣು, ಹೂವನ್ನು ರಥಕ್ಕೆ ಭಕ್ತರು ಅರ್ಪಿಸಿ ಗೋವಿಂದನ ನಾಮಸ್ಮರಣೆ ಮಾಡಿ ತೇರು ಎಳೆದರು.ವಿಪ್ರರ ವೇದಘೋಷ, ಮೆಟ್ಟಿಲೋತ್ಸವ, ದಾಸರಪದ ಗಾಯನ, ಮಂಗಳವಾದ್ಯ, ಡೊಳ್ಳು, ನಾಸಿಕ್ ಡೋಲು, ತಮಟೆಮೇಳ ಉತ್ಸವಕ್ಕೆ ಕಳೆ ತಂದಿದ್ದವು.

ಬ್ರಾಹ್ಮಿ ಮುಹೂರ್ತಕ್ಕೆ ದೇವಾಲಯದಲ್ಲಿ ರಂಗನಾಥ ಸ್ವಾಮಿ ಶ್ರೀದೇವಿ ಭೂದೇವಿಯೊಂದಿಗೆ ಕಲ್ಯಾಣೋತ್ಸವ ದೇವಾಲಯದಲ್ಲಿ ಜರುಗಿತು.

 

ನಂತರ  ಗಜೇಂದ ಮೋಕ್ಷ, ನೈವೇದ್ಯ, ಮಂತ್ರ ಪುಷ್ಪ ಘೋಷಣೆ    ಉತ್ಸವ   ನಡೆಯಿತು.  ದೇವಾಲಯವನ್ನು ದೇಗುಲವನ್ನು     ದೀಪದಿಂದ  ಹಾಗೂ ರಥವನ್ನು ಹೂವಿನಿಂದ  ಶೃಂಗರಿಸಲಾಗಿತ್ತು. ಮುಖ್ಯ ದೇವತೆಗೆ ವಿಶೇಷ ಶೇಷಶಾಯಿ ಅಲಂಕಾರ ಮಾಡಲಾಗಿತ್ತು.ಎಪಿಎಂಸಿ ನಿರ್ದೇಶಕ ಮಂಜುನಾಥ, ಜಿ.ಪಂ. ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಗ್ರಾ.ಪಂ. ಅಧ್ಯಕ್ಷ ಹನುಮಂತಪ್ಪ, ಗ್ರಾ.ಪಂ. ಸದಸ್ಯ ಕೆ.ಜಿ. ಮಂಜುನಾಥ್, ಆಗಮಿಕ ಮಂಜುನಾಥಾಚಾರ್, ಅರ್ಚಕ ಗುರುರಾಜಾಚಾರ್, ಉಪಾಧಿವಂತರಾದ ಅಮರನಾಥ್ ಜೋಯ್ಸ ಇದ್ದರು.ನಿಟ್ಟೂರು ತೇರು

ಮಲೇಬೆನ್ನೂರು ಸಮೀಪದ ನಿಟ್ಟೂರಿನ ಆಂಜನೇಯ ಸ್ವಾಮಿ ರಥೋತ್ಸವ ಗುರುವಾರ ಸಾಂಪ್ರದಾಯಿಕ ರೀತಿ ಜರುಗಿತು. ರಥ ಶಾಂತಿ, ಬಲಿದಾನ ನಂತರ `ರಾಮ ರಾಮ  ಗೋವಿಂದ' ನಾಮ ಸ್ಮರಣೆಯೊಂದಿಗೆ ಜನತೆ ತೇರು ಎಳೆದರು.  ಸಂಜೆ ಮುಳ್ಳು ಗದ್ದಿಗೆ ಉತ್ಸವದಲ್ಲಿ ಜನತೆ ಕಾರೆಮುಳ್ಳು ತುಳಿದು ಭಕ್ತಿ ಸಮರ್ಪಿಸಿದರು.ಮೆದಿಕೆರೆ: ಆಂಜನೇಯ ಸ್ವಾಮಿ ರಥೋತ್ಸವ

ಸಂತೇಬೆನ್ನೂರು:
ಇಲ್ಲಿಗೆ ಸಮೀಪದ ಮೆದಿಕೆರೆ ಗ್ರಾಮದಲ್ಲಿ ಗುರುವಾರ ಆಂಜನೇಯ ಸ್ವಾಮಿ ರಥೋತ್ಸವ ಸಂಭ್ರಮದಿಂದ ಜರುಗಿತು.

ವಿಶೇಷ ಪೂಜೆ ವಿಧಿ-ವಿಧಾನಗಳ ನಂತರ ಉತ್ಸವ ಮೂರ್ತಿಯನ್ನು ರಥದ ಪೀಠದಲ್ಲಿ ಸ್ಥಾಪಿಸಲಾಯಿತು. ಭಕ್ತ ವೃಂದ ಬಾಳೆಹಣ್ಣು ಎಸೆದು ಹಾಗೂ ತೆಂಗಿನಕಾಯಿ ಹೊಡೆಯುವ ಮೂಲಕ ಭಕ್ತಿ ಸಮರ್ಪಿಸಿದರು.ಆಂಜನೇಯ ಸಾ ್ವಮಿ ರಥೋತ್ಸವ

ಹರಪನಹಳ್ಳಿ:
ಪಟ್ಟಣದ ಕೋಟೆಪ್ರದೇಶದಲ್ಲಿರುವ ಐತಿಹಾಸಿಕ ಕೋಟೆ ಆಂಜನೇಯಸ್ವಾಮಿ ರಥೋತ್ಸವ ದವನದ ಹುಣ್ಣಿಮೆ  ಹಾಗೂ ಚದ್ರಗ್ರಹಣದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಸಹಸ್ರಾರು ಭಕ್ತಾದಿಗಳ ಸಂಭ್ರಮ ಸಡಗರದ ಮಧ್ಯೆ ವೈಭವದಿಂದ ನೆರವೇರಿತು.ದೇಗುಲದ ಆವರಣದಲ್ಲಿ ನಿರ್ಮಿಸಲಾಗಿದ್ದ ರಥಕ್ಕೆ ನವನವೀನ ಬಾವುಟ, ವಿವಿಧ ದೇವಾನುದೇವತೆಗಳ ಭಾವಚಿತ್ರ ಹಾಗೂ ತೋರಣಗಳಿಂದ ಅಲಂಕೃತಗೊಳಿಲಾಗಿತ್ತು.ಸ್ವಾಮಿಯ ಮೂರ್ತಿಗೆ ಪೂಜಾದಿಗಳನ್ನು ಪೂರೈಸಿದ ಅರ್ಚಕರು ಹಾಗೂ ದೇವಸ್ಥಾನದ ಧರ್ಮದರ್ಶಿ ಮಂಡಳಿ ಪ್ರಮುಖರು ದೇವರ ಮೂರ್ತಿಯನ್ನು  ಸಕಲ ವಾದ್ಯಗಳ ಮೆರವಣಿಗೆಯಲ್ಲಿ ರಥದ ಬಳಿ ಕರೆ ತಂದರು.ಬಳಿಕ, ಪ್ರದಕ್ಷಿಣೆ ಹಾಕಿದ ನಂತರ, ಸ್ವಾಮಿಯ ಪಟ(ಧ್ವಜ) ಹಾರ ಸೇರಿದಂತೆ ವಿವಿಧ ವಸ್ತುಗಳನ್ನು ಹಾರಾಜು ಹಾಕಲಾಯಿತು.ಧರ್ಮದರ್ಶಿ ಕಟ್ಟಿ ರಂಗನಾಥ, ಡಾ.ಹರ್ಷ ತಟ್ಟಿ, ದಂಡಿನ ವೆಂಕಟೇಶ್, ಎಚ್.ಎ. ಸುರೇಂದ್ರನಾಥ, ಎಂ. ರಮೇಶ್, ಪೂಜಾರ್ ಮಂಜುನಾಥ, ಎಚ್.ಎ. ವೇಣುಗೋಪಾಲ್, ಪಟ್ನಾಮದ ನಾಗರಾಜ  ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಬೆಣ್ಣಿಹಳ್ಳಿ: ಜೋಡಿ ರಥೋತ್ಸವ

ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಹಂಪಾಂಬಾ ಹಾಗೂ ಪಂಪಾಪತಿಸ್ವಾಮಿ ಜೋಡಿ ರಥೋತ್ಸವ ಗುರುವಾರ ಸಹಸ್ರಾರು ಭಕ್ತರ ಸಂಭ್ರಮದಲ್ಲಿ ವಿಜೃಂಭಣೆಯಿಂದ ನೆರವೇರಿದವು.ಹೊಸ ವಿನ್ಯಾಸ ಹಾಗೂ ಆಕರ್ಷಣೆ ಚಿತ್ತಾರದಲ್ಲಿ ನಿರ್ಮಿಸಲಾದ ಉಭಯ ನೂತನ ರಥಗಳಿಗೂ ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

ಪ್ರತಿಕ್ರಿಯಿಸಿ (+)