`ಲಕ್ಷ್ಮೀ' ಕಟಾಕ್ಷ!

7

`ಲಕ್ಷ್ಮೀ' ಕಟಾಕ್ಷ!

Published:
Updated:
`ಲಕ್ಷ್ಮೀ' ಕಟಾಕ್ಷ!

ಅಂದುಕೊಂಡಂತೆ `ಲಕ್ಷ್ಮೀ' ಒಲಿದಿದ್ದಾಳೆ. ಶೀರ್ಷಿಕೆಯನ್ನು ಸಮರ್ಥಿಸಿಕೊಳ್ಳುವಂತೆ ಚಿತ್ರವನ್ನು ಗೆಲ್ಲಿಸಿದ ಪ್ರೇಕ್ಷಕ ನಿರ್ಮಾಪಕರ ಜೋಳಿಗೆಯನ್ನೂ ತುಂಬಿಸಿದ್ದಾನೆ. ಸುದ್ದಿಮಿತ್ರರ ಎದುರಾದ ಚಿತ್ರತಂಡದ ಮುಖದಲ್ಲಿ ಇದ್ದದ್ದು ಇದೇ ಸಂಭ್ರಮ. ಬಿಡುಗಡೆಯಾದ 12 ದಿನಕ್ಕೇ `ಲಕ್ಷ್ಮೀ' ಚಿತ್ರದ ಸಂಪಾದನೆ 7.5 ಕೋಟಿ ರೂ ಎನ್ನುವುದು ನಿರ್ಮಾಪಕ ಭಾಸ್ಕರ್ ನೀಡಿದ ಮಾಹಿತಿ.ಚಿತ್ರಮಂದಿರಗಳಲ್ಲಿ `ಲಕ್ಷ್ಮೀ' ಚೆನ್ನಾಗಿ ಓಡುತ್ತಿದೆ ಎಂಬ ಖುಷಿ ನಿರ್ಮಾಪಕರಲ್ಲಿತ್ತು. 169 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೂ ಈಗ ಅವುಗಳ ಸಂಖ್ಯೆ 120ಕ್ಕೆ ಇಳಿದಿದೆ. ನಿರ್ಮಾಪಕರ ಪಾಲಿಗೆ ಅದೇನೂ ದೊಡ್ಡ ಸಮಸ್ಯೆಯಲ್ಲ. ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ ಕೆಲವು ದೃಶ್ಯಗಳು ದೀರ್ಘವಾಗಿವೆ ಎಂಬ ಮಾತುಗಳು ಕೇಳಿಬಂದ ಕಾರಣ ಸುಮಾರು 20 ನಿಮಿಷಗಳಷ್ಟು ಕತ್ತರಿ ಹಾಕಿ ಚಿತ್ರವನ್ನು ಮತ್ತಷ್ಟು ಚೊಕ್ಕಗೊಳಿಸಲಾಗಿದೆ.ಕಥೆಗೆ ಕಿಂಚಿತ್ತೂ ತೊಂದರೆಯಾಗದಂತೆ ಅಚ್ಚುಕಟ್ಟಾಗಿಸಿರುವ ನಿರ್ದೇಶಕ ರಾಘವ ಲೋಕಿ ಅವರ ಶ್ರಮ ನಿರ್ಮಾಪಕರಿಗೆ ಖುಷಿ ತಂದಿದೆ.

`ಪುಸ್ಸಿ ಕ್ಯಾಟ್...' ಹಾಡು ಗೆದ್ದಿದ್ದರೂ ಅನಿವಾರ್ಯವಾಗಿ ಅದಕ್ಕೆ ಕತ್ತರಿ ಹಾಕುವಂತಾಯಿತು ಎಂಬ ಸಣ್ಣನೆ ಬೇಸರ ಸಂಗೀತ ನಿರ್ದೇಶಕ ಗುರುಕಿರಣ್ ಅವರಲ್ಲಿತ್ತು. ನಟ ಶಿವರಾಜ್‌ಕುಮಾರ್ ಮತ್ತು ನಟಿ ಪ್ರಿಯಾಮಣಿ ಸುದ್ದಿಗೋಷ್ಠಿಗೆ ಗೈರುಹಾಜರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry